KARNATAKA
ಚೈತ್ರಾ ಕುಂದಾಪುರ ಯಾರು ಅಂತ ಗೊತ್ತಿಲ್ಲ – ಶಾಸಕ ಸುನಿಲ್ ಕುಮಾರ್

ಉಡುಪಿ ಸೆಪ್ಟೆಬರ್ 16: ಎಂಎಲ್ಎ ಸಿಟ್ ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಿರುವವರ ಮುಖಪರಿಚಯವೂ ಇಲ್ಲ, ಅವರೊಂದಿಗೆ ನಾನು ಮಾತನಾಡಿಲ್ಲ, ಆಕಸ್ಮಿಕವಾಗಿಯೂ ಕೂಡ ಯಾವುದೇ ಕಾರ್ಯಕ್ರಮದಲ್ಲಿ ಅವರೊಂದಿಗೆ ನಾನು ಭೇಟಿಯಾಗಿಲ್ಲ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಚೈತ್ರಾ ಕುಂದಾಪುರ ಪೋನ್ ಆಡಿಯೋ ಒಂದರಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಹೆಸರನ್ನು ಹೇಳಿರುವ ಬಗ್ಗೆ ಪ್ರತಿಕ್ರಿಯಿರುವ ಅವರು ಚೈತ್ರಾ ಕುಂದಾಪುರ ಅವರ ಮುಖ ಪರಿಚಯವೇ ಇಲ್ಲ ಎಂದಿದ್ದಾರೆ. ಅಲ್ಲದೆ ಬಿಜೆಪಿಯಲ್ಲಿ ಹಣದಿಂದ ಟಿಕೆಟ್ ಸಿಗುತ್ತದೆ ಎನ್ನುವುದು ಭ್ರಮೆ, ಬಿಜೆಪಿಯಲ್ಲಿ ಯಾರೋ ರಾಜಕಾರಣಿಗಳ ಹೆಸರು ಹೇಳಿ ಹಣ ಮಾಡುವವರ ವಿರುದ್ದ ನಿರ್ಧ್ಯಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಘಟನೆ ತಾರ್ಕಿಕ ಅಂತ್ಯ ತರಬೇಕೆಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸುವುದಾಗಿ ಹೇಳಿದರು.
