Connect with us

    DAKSHINA KANNADA

    ವಿಪಕ್ಷಗಳಿಂದ ರಾಜ್ಯದಲ್ಲಿ ಕೊರೊನಾ ರಾಜಕೀಯ- ಶಾಸಕ ಸಂಜೀವ ಮಠಂದೂರು ಆರೋಪ

    ಪುತ್ತೂರು ಅಗಸ್ಟ್ 3: ವಿಪಕ್ಷಗಳು ರಾಜ್ಯ ಸರಕಾರದ ವಿರುದ್ದ ಕೊರೊನಾ ರಾಜಕೀಯ ಮಾಡುತ್ತಿವೆ ಎಂದು ಪುತ್ತೂರ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ. ಆರೋಪ ಮಾಡಬೇಕು ಎನ್ನುವ ಒಂದೇ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದಿಯಾಗಿ ಕಾಂಗ್ರೇಸ್ ಮುಖಂಡರು ರಾಜ್ಯ ಸರಕಾರದ ವಿರುದ್ದ ಕೊರೊನಾದ ಲೆಕ್ಕಕೊಡಿ ಎನ್ನುವ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ ಎಂದ ಅವರು ಈಗಾಗಲೇ ಕೊರೊನಾ ಲಾಕ್ಡ ಡೌನ್ ಬಳಿಕದ ಕೊರೊನಾ ಸಂಬಂಧಿಸಿದ ವಸ್ತುಗಳ ಖರೀದಿಯ ಕುರಿತು ಎಲ್ಲಾ ರೀತಿಯ ಲೆಕ್ಕಗಳನ್ನು ರಾಜ್ಯದ ಐದು ಮಂದಿ ಸಚಿವರು ಈಗಾಗಲೇ ನೀಡಿದ್ದಾರೆ.

    ಅಲ್ಲದೆ ಈ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಾ ಸಾಕಷ್ಟು ಬಾರಿ ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೆ ವಿಪಕ್ಷಗಳಿಗೆ ಟೀಕೆ ಮಾಡಲು ಯಾವುದೇ ವಿಚಾರವಿಲ್ಲದ ಕಾರಣ ಕೊರೊನಾ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಲೆಕ್ಕ ಬೇಕಾದರೆ ರಾಜ್ಯ ಮುಖ್ಯ ಕಾರ್ಯದರ್ಶಿ ಅಥವಾ ಆಯಾಯ ಇಲಾಖೆಗಳಿಗೆ ಪಡೆದುಕೊಳ್ಳಬಹುದು ಎಂದು ಅವರು ಎಲ್ಲಾ ಖರೀದಿಗಳನ್ನೂ ರಾಜ್ಯ ಸರಕಾರ ಪಾರದರ್ಶಕವಾಗಿ ಮಾಡಿದ್ದು, ವಿಪಕ್ಷಗಳು ರಾಜ್ಯದ ಜನತೆಯನ್ನು ದಾರಿ ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ಅವರು ಆರೋಪಿಸಿದರು.

    ADVERTISEMENT

    ಕೊರೊನಾ ರಾಜ್ಯದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಸಂದರ್ಭದಲ್ಲಿ ಹಾಗೂ ಲಾಕ್ ಡೌನ್ ಜಾರಿಯಾದ ಸಂದರ್ಭದಲ್ಲಿ ಸೋಂಕನ್ನು ಹೆಚ್ಚು ವ್ಯಾಪಿಸದಂತೆ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ವಹಿಸಿದ ಕಾರ್ಯ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ಆದರೆ ಆ ಸಮಯದಲ್ಲಿ ತೆಪ್ಪಗಿದ್ದ ವಿಪಕ್ಷ ನಾಯಕರು ಇದೀಗ ಕೊರೊನಾ ತನ್ನ ಪೀಕ್ ಸ್ಟೇಜ್ ಗೆ ಬಂದ ಸಮಯದಲ್ಲಿ ಸತಕಾರವನ್ನು ಪ್ರಶ್ನಿಸುತ್ತಿದೆ. ಹಾದಿ ಬೀದಿಯಲ್ಲಿ ಲೆಕ್ಕಕೊಡಿ ಎಂದು ಕೇಳುವ ವಿಪಕ್ಷಗಳು ಸರಿಯಾದ ಲೆಕ್ಕವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳಬಹುದಿ ಎಂದು ಅವರು ಇದೇ ಸಂದರ್ಭದಲ್ಲಿ ವಿಪಕ್ಷಗಳಿಗೆ ಮಾರ್ಗದರ್ಶನವನ್ನೂ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply