Connect with us

  LATEST NEWS

  ಶಾಸಕ ರಘುಪತಿ ಭಟ್ ಅಸಮಧಾನ ಶಮನ – ಕಾರ್ಯಕರ್ತರ ಸಭೆಯಲ್ಲಿ ಭಾಗಿ

  ಉಡುಪಿ ಎಪ್ರಿಲ್ 13: ಉಡುಪಿ ವಿಧಾನಸಭೆ ಕ್ಷೇತ್ರದ ಟಿಕೆಟ್ ಮಿಸ್ ಆಗಿದ್ದಕ್ಕೆ ಬೇಸರ ಮಾಡಿಕೊಂಡಿದ್ದ ಶಾಸಕ ರಘುಪತಿ ಭಟ್ ಇಂದು ತಮ್ಮ ಅಸಮಧಾನ ಮರೆತು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು, ಯಶ್ ಪಾಲ್ ಸುವರ್ಣ ಅವರ ಚುನಾವಣೆಗೆ ಇಂದಿನಿಂದಲೇ ಪ್ರಚಾರದಲ್ಲಿ ಭಾಗವಹಿಸಲಿದ್ದೇನೆ ಎಂದಿದ್ದಾರೆ.


  ತಮ್ಮ ಅಸಮಧಾನವನ್ನು ಬದಿಗಿಟ್ಟು ಇಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ರಘುಪತಿ ಭಟ್ ಯಶ್ ಪಾಲ್ ಸುವರ್ಣ ಅವರನ್ನು ಈ ಬಾರಿ 50 ರಿಂದ 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣಗೆ ಸಂಪೂರ್ಣ ಬೆಂಬಲ ಕೊಟ್ಟು ಇಂದಿನಿಂದಲೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದ ಅವರು ಟಿಕೆಟ್ ಇಲ್ಲ ಎಂಬ ನೋವಿನಿಂದ ಹೊರಗೆ ಬಂದಿದ್ದೇನೆ, ಸಾಮಾಜಿಕ ಜಾಲತಾಣದಲ್ಲಿ ಬೆಂಬಲಗರ ಪೋಸ್ಟ್ ಗಳಿಗೆ ಉತ್ತರ ನೀಡಿದ ರಘುಪತಿ ಭಟ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಇಂದಿಗೇ ನಿಲ್ಲಿಸಬೇಕು, ಕೇವಲ ಅಭ್ಯರ್ಥಿ, ಬಿಜೆಪಿ ಪಕ್ಷದ ಪರ ಮಾತ್ರ ಪ್ರಚಾರ ಮಾಡಬೇಕು ಎಂದು ತಮ್ಮ ಅಭಿಮಾನಿಗಳು ಕಾರ್ಯಕರ್ತರಿಗೆ ರಘುಪತಿ ಭಟ್ ಸೂಚನೆ ನೀಡಿದ್ದಾರೆ.


  ಮಾಜಿ ಸಿಎಂ ಯಡಿಯೂರಪ್ಪ ನನಗೆ ಕರೆ ಮಾಡಿದ್ದರು, ಪಕ್ಷ ಕೊಟ್ಟ ಅಭ್ಯರ್ಥಿಯ ಜೊತೆ ಕೆಲಸ ಮಾಡುವ ಎರಡನೇ ಅವಕಾಶ ಸಿಕ್ಕಿದೆ. ನಾನು ಅಭ್ಯರ್ಥಿಯಾದರೆ ಎಷ್ಟು ಸ್ಪೀಡ್ ನಲ್ಲಿ ಕೆಲಸ ಮಾಡುತ್ತೇನೋ ಅದೇ ರೀತಿ ಕೆಲಸ ಮಾಡುತ್ತೇನೆ. ಪಕ್ಷ ನಮಗೆ ಒಳ್ಳೆಯ ಅಭ್ಯರ್ಥಿ ಕೊಟ್ಟಿದ್ದಾರೆ. ಪಕ್ಷ ನನಗೆ ಮೂರು ಬಾರಿ ಶಾಸಕನಾಗುವ ಅವಕಾಶ ಕೊಟ್ಟಿದೆ. ಸಾಮಾನ್ಯ ಕುಟುಂಬದಿಂದ ಬಂದವ ಮೂರು ಬಾರಿ ಶಾಸಕನಾಗಿದ್ದು ದೊಡ್ಡ ವಿಷಯ, ಇನ್ನು ಮುಂದೆ ನಾನು ಅಸಮಾಧಾನದ ಮಾತನಾಡುವುದು ಸರಿಯಲ್ಲ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply