LATEST NEWS
ಶಾಸಕ ಹರೀಶ್ ಪೂಂಜಾ ಮೇಲೆ ದಾಳಿ ಪ್ರಕರಣ – ಆರೋಪಿ ಅರೆಸ್ಟ್..ವಾಹನದಲ್ಲಿ ಯಾವುದೇ ಮಾರಕಾಯುಧ ಪತ್ತೆಯಾಗಿಲ್ಲ…!!
ಮಂಗಳೂರು ಅಕ್ಟೋಬರ್ 14: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿಗೆ ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಜೀವ ಬೇದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನವಾಣೆ ವಶಕ್ಕೆ ಪಡೆದ ಆರೋಪಿ ಮಂಗಳೂರಿನ ಪಳ್ನೀರ್ ನಿವಾಸಿ ರಿಯಾಝ್ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಬಳಸಲಾಗಿದ್ದ ಸ್ಕಾರ್ಫಿಯೋವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿ ವಿರುದ್ದ ಈವರೆಗೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ. ಹಾಗೂ ವಾಹನದಲ್ಲಿ ಯಾವುದೇ ಮಾರಕಾಯುಧಗಳು ಪತ್ತೆಯಾಗಿಲ್ಲ ಎಂದು ತಿಳಿಸಿದರು.
ಪ್ರಾಥಮಿಕ ತನಿಖೆಯಲ್ಲಿ ವಾಹನ ಓವರ್ ಟೇಕ್ ಮಾಡುವ ಭರದಲ್ಲಿ ಘಟನೆ ನಡೆದಿರುವ ಸಾಧ್ಯತೆ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದು ಪೂರ್ಣ ತನಿಖೆಯ ಬಳಿಕ ಹೆಚ್ಚಿನ ವಿವರಗಳನ್ನು ತಿಳಿಸಲಾಗುತ್ತದೆ ಎಂದು ಅವರು ಹೇಳಿದರು.