DAKSHINA KANNADA
ಪೋಲಿಸರಿಂದ ಕುರಾನ್ ಅಪಮಾನ, ತನಿಖೆಗೆ ಐಜಿಪಿಗೆ ಪತ್ರ : ಲೋಬೋ
ಮಂಗಳೂರು, ಸೆಪ್ಟೆಂಬರ್ 05 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೊಲೀಸರು ತನಿಖೆ ನೆಪವೊಡ್ಡಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಪವಿತ್ರ ಕುರಾನ್ ಗ್ರಂಥವನ್ನು ನೆಲಕ್ಕೆ ಎಸೆದು ದಾಂಧಲೆ ನಡೆಸಿದ ಆರೋಪಗಳ ಸತ್ಯಾಸತ್ಯಾತೆಯನ್ನು ತಿಳಿಯಲು ಆಂತರಿಕ ತನಿಖೆಗೆ ಪಶ್ಚಿಮ ವಲಯ ಐಜಿಪಿ ಗೆ ಪತ್ರ ಬರೆಯಲಾಗುವುದು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಎಲ್ಲ ಧರ್ಮದ ಧಾರ್ಮಿಕ ಗ್ರಂಥಗಳಿಗೆ ಅದರದ್ದೇ ಆದ ಪಾವಿತ್ರತೆ ಇದೆ. ಹೀಗೆ ಮಾಡಿದ್ದರೆ ಪೋಲಿಸರ ವರ್ತನೆ ಸರಿಯಲ್ಲ, ಯಾವುದೇ ಗ್ರಂಥವನ್ನು ಅವಮಾನಿಸುವ ಅಧಿಕಾರ ಯಾರಿಗೂ ಇಲ್ಲ . ಪೊಲೀಸರು, ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳಾಗಲಿ ಧಾರ್ಮಿಕ ಗ್ರಂಥಕ್ಕೆ ಅವಮಾನ ಮಾಡುವುದು ಖಂಡನೀಯ. ಒಂದು ವೇಳೆ ಪೊಲೀಸರು ಅವಮಾನ ಮಾಡಿದ್ದರೆ ಅವರ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮಕೈಗೊಳ್ಳಬೇಕು. ಈ ರೀತಿಯ ಘಟನೆಗಳಿಂದ ಕೋಮು ಸೂಕ್ಷ್ಮಾವಾದ ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಮತ್ತು ಅಭಿವೃದ್ದಿ ಕುಂಠಿತವಾಗುತ್ತದೆ. ಬಂಟ್ವಾಳದಲ್ಲಿ ಪವಿತ್ರ ಕುರಾನ್ ಗ್ರಂಥವನ್ನು ನೆಲಕ್ಕೆ ಎಸೆದು ದಾಂಧಲೆ ನಡೆಸಿದ ಪೋಲಿಸರ ಮೇಲಿನ ಆರೋಪಗಳ ಸತ್ಯಾಸತ್ಯಾತೆಯನ್ನು ತಿಳಿಯಲು ಆಂತರಿಕ ತನಿಖೆಗೆ ಪಶ್ಚಿಮ ವಲಯ ಐಜಿಪಿ ಗೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೆ. 12ರಂದು ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ.
You must be logged in to post a comment Login