BELTHANGADI
ತಡರಾತ್ರಿ ಪತ್ನಿ ಮಗುವಿಗೆ ಜನ್ಮ ನೀಡಿದ್ದರೂ ಅಪ್ಪನಾದ ಖುಷಿಯಲ್ಲಿದ್ದರೂ ಕಾರ್ಯಕರ್ತರ ರಕ್ಷಣೆಗೆ ಧಾವಿಸಿದ ಬೆಳ್ತಂಗಡಿ ಶಾಸಕ

ತಡರಾತ್ರಿ ಪತ್ನಿ ಮಗುವಿಗೆ ಜನ್ಮ ನೀಡಿದ್ದರೂಅಪ್ಪನಾದ ಖುಷಿಯಲ್ಲಿದ್ದರೂ ಕಾರ್ಯಕರ್ತರ ರಕ್ಷಣೆಗೆ ಧಾವಿಸಿದ ಬೆಳ್ತಂಗಡಿ ಶಾಸಕ
ಬೆಳ್ತಂಗಡಿ ಜೂನ್ 28: ತಡರಾತ್ರಿ ಪತ್ನಿ ಮಗುವಿಗೆ ಜನ್ಮ ನೀಡಿದ್ದರೂ ಅಪ್ಪನಾದ ಖುಷಿಯಲ್ಲಿದ್ದರೂ ಕೂಡ ಕಾರ್ಯಕರ್ತರ ರಕ್ಷಣೆ ಧಾವಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಂದಾರು ಬಳಿ ಅಕ್ರಮ ಗೋಸಾಗಟದಲ್ಲಿ ಮೂರು ಹಸುಗಳನ್ನು ಅಮಾನುಷ ರೀತಿಯಲ್ಲಿ ಕಟ್ಟಿ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಗೋಕಳ್ಳರನ್ನು ಉಪ್ಪಿನಂಗಡಿಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಖಚಿತ ಮಾಹಿತಿಯ ಮೇರೆಗೆ ಗೋಕಳ್ಳರ ವಾಹನ ತಡೆದು ಗೋಕಳ್ಳರನ್ನು ಹಿಡಿದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಗೋಕಳ್ಳರನ್ನು ಹಿಡಿದುಕೊಟ್ಟರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನೇ ವಶಕ್ಕೆ ಪಡೆದು ಬಂಧಿಸಿ ಕೇಸು ದಾಖಲು ಮಾಡಿದ್ದಾರೆ. ಈ ಘಟನೆಯ ಮಾಹಿತಿ ಸಿಕ್ಕ ತಕ್ಷಣ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ, ತಡರಾತ್ರಿ ತಮ್ಮ ಪತ್ನಿ ಮಗುವಿಗೆ ಜನ್ಮ ನೀಡಿದ ಸಂಧರ್ಭದಲ್ಲಿಯೂ ಉಪ್ಪಿನಂಗಡಿ ಠಾಣೆಗೆ ದೌಡಾಯಿಸಿ ಪೊಲೀಸರನ್ನು ತರಾಟೆಗೆ ತೆಗೆದುಗೊಂಡಿದ್ದಾರೆ.
ಅಕ್ರಮ ಗೋಸಾಗಾಟವನ್ನು ಪತ್ತೆ ಹಚ್ಚಿದ ಹಿಂದೂ ಸಂಘಟನೆ ಯುವಕರ ಮೇಲೆಯೇ ಪೊಲೀಸರು ಕೇಸ್ ದಾಖಲಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಠಾಣೆಯ ಎದುರಲ್ಲೇ ಪ್ರತಿಭಟನೆ ಮಾಡಿದ್ದಾರೆ.
ಕಾನೂನಿನ ಮೂಲಕ ಪೊಲೀಸರಿಗೆ ಗೋಕಳ್ಳರನ್ನ ಒಪ್ಪಿಸಿದರೆ ಪೊಲೀಸರೇ ಹಿಡಿದುಕೊಟ್ಟವರ ಮೇಲೆ ಕೇಸ್ ಹಾಕುತ್ತಿದ್ದಾರೆ. ಮುಂದೆ ಗೋಕಳ್ಳರು ತಲ್ವಾರ್ ಹಿಡಿದು ಬಂದರೆ ಅದೇ ತಲ್ವಾರ್ ಹಿಡಿದು ನಾವೂ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.