BELTHANGADI
ಸನತ್ ಶೆಟ್ಟಿ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ : 5 ಲಕ್ಷ ಪರಿಹಾರದ ಚೆಕ್ ವಿತರಣೆ
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಂಗಾರ ಪಲ್ಕೆಯ ಗುಡ್ಡ ಕುಸಿತದಲ್ಲಿ ಮೃತಪಟ್ಟ ಸನತ್ ಶೆಟ್ಟಿ ಮನೆಗೆ ಸ್ಥಳಿಯ ಶಾಸಕರಾದ ಹರೀಶ್ ಪೂಂಜಾ ಅವರು ಇಂದು ಭೇಟಿ ನೀಡಿ ಮನೆಯ ಸದಸ್ಯರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 5 ಲಕ್ಷದ ಚೆಕ್ಕನ್ನು ಸನತ್ ಶೆಟ್ಟಿ ಅವರ ಹೆತ್ತವರಿಗೆ ಹಸ್ತಾಂತರಿಸಲಾಯಿತು.
ಲಾಯಿಲ ಗ್ರಾಮದ ಕಾಶಿಬೆಟ್ಟು ವಾಸುದೇವ ಶೆಟ್ಟಿ ಅವರ ಪುತ್ರ 20 ವರ್ಷದ ಸನತ್ ಶೆಟ್ಟಿ ಬಂಗಾರಪಲ್ಕೆ ಜಲಪಾತ ವೀಕ್ಷಣೆಗೆ ಹೋದ ಸಂದರ್ಭ ಪಕ್ಕದ ಗುಡ್ಡ ಜರಿದುಮಣ್ಣಿನ ಅಡಿಗೆ ಬಿದ್ದು ಕಣ್ಮರೆಯಾಗಿದ್ದರು.
ಜನವರಿ 25ರಂದು ಈ ದುರ್ಘಟನೆ ನಡೆದಿತ್ತು. ಸತತ 22 ದಿನಗಳ ಕಾರ್ಯಾಚರಣೆ ಬಳಿಕ ನಿನ್ನೆ ಸನತ್ ಶೆಟ್ಟಿ ಅವರ ಮೃತ ದೇಹ ಮತ್ತೆಯಾಗಿತ್ತು.