DAKSHINA KANNADA
ಶಾಲಾ ಪಠ್ಯ ಪುಸ್ತಕದಿಂದ ನಾರಾಯಣ ಗುರು ಪಠ್ಯ ತೆಗೆದು ಹಾಕುವ ಹಿಂದೆ ಶಾಸಕ ಹರೀಶ್ ಪೂಂಜಾ ಕೈವಾಡವಿದೆ: ಅಮಳ ರಾಮಚಂದ್ರ

ಪುತ್ತೂರು ಮಾರ್ಚ್ 01: ಶಾಲಾ ಪಠ್ಯ ಪುಸ್ತಕದಿಂದ ನಾರಾಯಣ ಗುರು ಪಠ್ಯ ತೆಗೆದು ಹಾಕುವ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೈವಾಡವಿದೆ ಎಂದು ಕೆ.ಪಿ.ಸಿ.ಸಿ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳ್ತಂಗಡಿ ಶಾಸಕರು ಇತ್ತೀಚೆಗೆ ಉದ್ದೇಶಪೂರ್ವಕವಾಗಿ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಯವರನ್ನು ಬೆಳ್ತಂಗಡಿ ಗೆ ಕರೆಸಿ ಸನ್ಮಾನಿಸಿದ್ದಾರೆ. ಆ ಸಂದರ್ಭದಲ್ಲಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದ್ದ ರೋಹಿತ್ ಚಕ್ರವರ್ತಿ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷನಾದ ನನ್ನ ಮೇಲೆ ರಾಜ್ಯದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಹರೀಶ್ ಪೂಂಜಾ ನಿರಂತರ ನನಗೆ ಬೆಂಬೆಲ ನೀಡಿ ಪ್ರೋತ್ಸಾಹಿಸಿದ್ದರು ಎಂದಿದ್ದಾರೆ.

ನಾರಾಯಣ ಗುರು, ಕೈಯಾರ ಕಿಂಞಣ್ಣ ರೈ ಸೇರಿದಂತೆ ಹಲವರು ಪಠ್ಯಗಳನ್ನು ಪಠ್ಯ ಪುಸ್ತಕದಿಂದ ತೆಗೆದರೂ, ಹರೀಶ್ ಪೂಂಜಾ ಮೌನವಹಿಸಿರುವುದರ ಹಿಂದೆ ಈ ಎಲ್ಲಾ ಪ್ರಕ್ರಿಯೆಗಳು ಹರೀಶ್ ಪೂಂಜಾದ ತಿಳುವಳಿಕೆಯಲ್ಲೇ ನಡೆದಿರುವುದು ಎಂದು ಸಾಬೀತಾಗುತ್ತದೆ ಎಂದರು.