Connect with us

    LATEST NEWS

    ಮಂಗಳೂರು- ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ…ಇಬ್ಬರ ಸಾವು..ಪವಾಡ ಸದೃಶವಾಗಿ ಬದುಕಿದ ಬಾಲಕಿ

    ಮಂಗಳೂರು ಮಾರ್ಚ್ 01:ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಿಯಾಲ್ ಬೈಲ್ ಸಮೀಪ ನಡೆದಿದ್ದು, ಈ ಘಟನೆಯಲ್ಲಿ ಮಹಿಳೆ ಹಾಗೂ 4 ವರ್ಷದ ಬಾಲಕಿ ಸಾವನಪ್ಪಿದ್ದು, ಮತ್ತೊರ್ವ ಬಾಲಕಿ ಪವಾಡ ಸದೃಶ್ಯವಾಗಿ ಬದುಕಿದ್ದಾಳೆ.


    ಮೃತರನ್ನು 33 ವರ್ಷದ ಮಹಿಳೆ ವಿಜಯ, 4 ವರ್ಷದ ಶೋಭಿತಾ ಎಂದು ಗುರುತಿಸಲಾಗಿದ್ದು , 12 ವರ್ಷದ ಯಜ್ಞಾ ಪವಾಡ ಸಧೃಶ್ಯರಾಗಿ ಬದುಕಿ ಉಳಿದಿದ್ದಾಳೆ. ಮೃತ ವಿಜಯಳ ಮೊದಲ ಪತಿ ಸುರೇಂದ್ರ 6 ವರ್ಷಗಳ ಹಿಂದೆ ಮೃತಪಟ್ಟಿದ್ದು, ಬಳಿಕ ವಿಜಯ 2 ನೇ ಮದುವೆಯಾಗಿದ್ದರು, ಆದ್ರೆ 20 ದಿನಗಳ ಹಿಂದೆ 2 ನೇ ಪತಿ ಉಮೇಶ್ ಕೂಡ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.


    ಇದರಿಂದ ತೀವ್ರವಾಗಿ ನೊಂದಿದ್ದ ವಿಜಯ ಮಕ್ಕಳೊಂದಿಗೆ ಆತ್ಮಹತ್ಯೆಗೆ ಚಿಂತನೆ ನಡೆಸಿ ತನ್ನ ಇಬ್ಬರು ಮಕ್ಕಳಿಗೂ ಕುಣಿಕೆ ಹಾಕಿ ತಾನು ಕೂಡ ನೇಣಿಗೆ ಶರಣಾಗಿದ್ದಾಳೆ. ಆದರೆ ಅದೃಷ್ಟವಶತ್ 12 ವರ್ಷದ ಯಜ್ಞಾ ಕಾಲ ಬುಡದಲ್ಲಿದ್ದ ಟಿಪಾಯಿಂದ ಬದುಕಿ ಉಳಿದು ಸಹಾಯಕ್ಕೆ ಕೂಗಿದ್ದಾಳೆ. ಮನೆಯ ಮೇಲಿನ ಮಹಡಿಯಲ್ಲಿ ಬಾಡಿಗೆ ಇದ್ದ ಹೋಟೆಲ್ ಸಿಬಂದಿಗಳು ಮಗುವಿನ ಚೀರಾಟ ಕೇಳಿ ಕೆಳಗೆ ಓಡಿ ಬಂದು ನೋಡಿದಾಗ ತಾಯಿ ವಿಜಯ ಮತ್ತು 4 ವರ್ಷದ ಮಗುವಿನ ಪ್ರಾಣ ಅದಾಗಲೇ ಹಾರಿ ಹೋಗಿತ್ತು,
    ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply