LATEST NEWS
ಅಯ್ಯಪ್ಪ ಮಾಲಾಧಾರಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು ಡಿಸೆಂಬರ್ 02: ಬರಿಗಾಲಲ್ಲಿ ನಡೆಯುವ ಶಾಸಕ ಎಂದೇ ಹೆಸರು ಪಡೆದಿರುವ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಇದೀಗ ಮತ್ತೆ ತಮ್ಮ ಸರಳತನದಿಂದ ಸುದ್ದಿಯಲ್ಲಿದ್ದಾರೆ.
ಕಳೆದ ಬಾರಿ ಬರಿಗಾಲ ಸಂತನಂತೆ ಬರಿಗಾಲಿನಲ್ಲಿ ಬ್ಯಾಗ್ ಹಿಡಿದು ರೈಲ್ವೆ ನಿಲ್ದಾಣದಲ್ಲಿ ಓಡಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು, ಇದೀಗ ಈಗ ಮತ್ತೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಯ್ಯಪ್ಪ ಮಾಲಾಧಾರಿಗಳ ಪಾದಕ್ಕೆ ನಮಸ್ಕರಿ ಆಶೀರ್ವಾದ ಪಡೆದಿದ್ದಾರೆ.

ಬೈಂದೂರು ತಾಲೂಕಿನ ಮುದ್ದೂರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಶಬರಿಮಲೆಗೆ ಹೊರಡುವ ಸಿದ್ಧತೆಯಲ್ಲಿದ್ದರು. ದೇವಳದಲ್ಲಿ ಇರುಮುಡಿ ಕಟ್ಟುತ್ತಿದ್ದ ಹಿರಿಯರು ಕಿರಿಯರು ಅಯ್ಯಪ್ಪ ಮಾಲಾಧಾರಿಗಳ ಕಾಲಿಗೆ ಶಾಸಕ ಗುರುರಾಜ ಗಂಟಿಹೊಳೆ ನಮಸ್ಕರಿಸುವ ಮೂಲಕ ಆಶೀರ್ವಾದ ಪಡೆದಿದ್ದಾರೆ. ಓರ್ವ ಶಾಸಕ ಸಾಮಾನ್ಯ ನಾಗರೀಕನಂತೆ ಅಯ್ಯಪ್ಪ ಸ್ವಾಮಿ ವ್ರತಧಾರಿಗಳ ಕಾಲಿಗೆ ಎರಗಿ ನಮಸ್ಕರಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.