Connect with us

    LATEST NEWS

    ಮಂಗಳೂರಿನ ನೀರು ಸಮಸ್ಯೆಗೆ ಪರಿಹಾರ ಸೂಚಿಸಿದ ಶಾಸಕ ಡಾ. ಭರತ್ ಶೆಟ್ಟಿ, ಕೊಳಚೆ ನೀರು ಮರುಬಳಕೆಗೆ ಯೋಜನೆ ರೂಪಿಸಲು ಸಲಹೆ..!!

    ಮಂಗಳೂರು: ಮಂಗಳೂರಿನ ನೀರು ಸಮಸ್ಯೆಗೆ ಶಾಸಕ ಡಾ. ಭರತ್ ಶೆಟ್ಟಿ ಪರಿಹಾರ ಸೂಚಿಸಿದ್ದು ನಗರದ ಕೊಳಚೆ ನೀರು ಮರುಬಳಕೆಗೆ ಯೋಜನೆ ರೂಪಿಸಲು ಮಂಗಳೂರು ಪಾಲಿಕೆಗೆ  ಸಲಹೆ ನೀಡಿದ್ದಾರೆ.

    h

    ನಾಗ್ಪುರ ಮಾದರಿಯಲ್ಲೇ ಮಂಗಳೂರಿನಲ್ಲೂ ಕೊಳಚೆ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ಮರುಬಳಕೆಗೆ ಸಿಗುವಂತೆ ಯೋಜನೆ ರೂಪಿಸಬೇಕು ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಸಲಹೆ ನೀಡಿದ್ದಾರೆ.

    ಮನಪಾ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ನಾಗ್ಪುರ 8 ವರ್ಷದ ಹಿಂದೆ ಆರಂಭಗೊಂಡ ಕೊಳಚೆ ನೀರು ಶುದ್ಧೀಕರಣ ಯೋಜನೆ ಅಲ್ಲಿ ಯಶಸ್ವಿಯಾಗಿದೆ. ರಾಜ್ಯ ರಾಜಧಾನಿಯಲ್ಲೂ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಶುದ್ಧೀಕರಿಸಿದ ಈ ನೀರನ್ನು ಕಟ್ಟಡ ಕಾಮಗಾರಿ, ಕೈಗಾರಿಕೆಗಳಿಗೆ ಬಳಕೆ ಮಾಡಬಹುದಾಗಿದೆ. ಮಹಾನಗರಪಾಲಿಕೆ ಈ ಯೋಜನೆಯನ್ನು ಕೈಗೆತ್ತಿಕೊಂಡರೆ ಎಂಆರ್‌ಪಿಎಲ್ ತನ್ನ ಕೈಗಾರಿಕೆಗೆ ಬಳಸಿಕೊಳ್ಳಲು ತಯಾರಿದೆ. ನಗರದಲ್ಲಿರುವ ವಸತಿ ಸಮುಚ್ಚಯದವರು ಎಸ್‌ಟಿಪಿಗಳನ್ನು ಆರಂಭಿಸಿ ಅದರ ನೀರನ್ನು ತೋಡು, ನದಿಗಳಿಗೆ ಬಿಡುತ್ತಿದ್ದಾರೆ. ಮಹಾನಗರಪಾಲಿಕೆಯ ನೀರು ಕೂಡಾ ಇದೇ ರೀತಿ ಆಗುತ್ತಿದೆ. ಇದನ್ನು ಮನಪಾ ಆದಾಯ ಮೂಲವಾಗಿ ಬಳಸಿಕೊಂಡು ಪಾರ್ಕ್, ಕೈಗಾರಿಕೆ, ಕಟ್ಟಡ ಕಾಮಗಾರಿಗೆ ನೀಡಲು ಅವಕಾಶವಿದೆ. ಆದರೆ ಅದಕ್ಕೊಂದು ಯೋಜನೆ ರೂಪಿಸಬೇಕಾಗಿದೆ ಎಂದು ಶಾಸಕರು ಹೇಳಿದರು.

     

    ಮಂಗಳೂರಿನಲ್ಲಿ ಬೇಸಿಗೆ ಬಂದಾಗ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದ್ದುö, ಒಂದು ವೇಳೆ ಕೊಳಚೆ ನೀರು ಶುದ್ಧಿಕರಣಕ್ಕೆ ಒತ್ತು ನೀಡಿ ಕುಡಿಯಲು ಹೊರತುಪಡಿಸಿದ ಕಾರ್ಯಕ್ಕೆ ಈ ನೀರು ಬಳಕೆ ಮಾಡಿದರೆ ಶೇ.30ರಷ್ಟು ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ಆದರೆ ಇದಕ್ಕೆ ಬಳಕೆ ಮಾಡುವ ಯಂತ್ರಗಳು, ನೀರಿನ ಶುದ್ಧತೆ ಬಗ್ಗೆ ಹೆಚ್ಚಿನ ಎಚ್ಚರವಹಿಸಬೇಕಾಗಿದೆ. ಪ್ರಾರಂಭಿಕವಾಗಿ ಸಣ್ಣ ಮಟ್ಟದಲ್ಲಿ ಆರಂಭಿಸಿ ಇದು ಯಶಸ್ವಿಯಾದಾಗ ದೊಡ್ಡ ಮಟ್ಟಕ್ಕೆ ವಿಸ್ತರಣೆ ಮಾಡಲು ಸುಲಭವಾಗಲಿದೆ ಎಂದು ಅವರು ಹೇಳಿದರು. ಶಾಸಕರ ಅಭಿಪ್ರಾಯಕ್ಕೆ ಮನಪಾ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *