DAKSHINA KANNADA
ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ
ಚಿತ್ರಾಪುರ: ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡ ಶ್ರೀ ಕೃಷ್ಣ ಬಾಲಾಂಜನೇಯ ಮಂದಿರ ಹಾಗೂ ಬೊಬ್ಬರ್ಯ ಬಂಟ ದೈವದ ಧರ್ಮ ಚಾವಡಿ,ರಂಗ ಮಂದಿರ ದ ಉದ್ಘಾಟನೆ ಮತ್ತು ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರೂ, ಶಾಸಕರಾದ ಡ.ಭರತ್ ಶೆಟ್ಟಿ ವೈ ಅವರು ಗುರುವಾರ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿಸಿದರು.
ಚಿತ್ರಾಪುರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಧ್ಯೇoದ್ರ ತೀರ್ಥ ಶ್ರೀಪಾದ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೆರವೇರಿಸಿದರು.
ದ . ಕ ಮಹಾಜನ ಸಂಘದ ಮಾಜಿ ಅಧ್ಯಕ್ಷರಾದ ಗಂಗಾಧರ್ ಹೊಸಬೆಟ್ಟು, ತಣ್ಣೀರುಬಾವಿ ಮೊಗವೀರ ಮಹಾಸಭಾ ದ ಅಧ್ಯಕ್ಷರಾದ ಲೀಲಾದರ್ ಕರ್ಕೇರ,ಪ್ರಧಾನ ಕಾರ್ಯದರ್ಶಿ ಗಿರೀಶ್ ಕರ್ಕೇರ,ಕೋಶಾಧಿಕಾರಿ ಭುಜಂಗ ಕೋಟ್ಯಾನ್,ಹೊಸಬೆಟ್ಟು ಗ್ರಾಮದ ಅಧ್ಯಕ್ಷರಾದ ಯೋಗೀಶ್ ಕರ್ಕೇರ, ಕೂಳೂರು ಮೊಗವೀರ ಮಹಾಸಭಾದ ಅಧ್ಯಕ್ಷರಾದ ಭರತ್ ಕುಮಾರ್, ಉಮೇಶ್ ಟಿ ಕರ್ಕೇರ ಮತ್ಸ್ಯ ರಾಜ್ ,ರಾಜೀವ್ ಕಾಂಚನ್, ಸುರೇಂದ್ರ ಬಂಗೇರ,ವಿಶ್ವನಾಥ್ ಕರ್ಕೇರ,ಶರತ್ ಬಂಗೇರ , ಮಾಧವ ಪುತ್ರನ್ ಮತ್ತಿತರ ಪ್ರಮುಖರು ಉಪ್ಥಿತರಿದ್ದರು.