Connect with us

    DAKSHINA KANNADA

    VHP ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಭಾಗಿ, ಕಾಂಗ್ರೆಸ್ ಪಕ್ಷದ ನಿಲುವು ಪ್ರಶ್ನಿಸಿದ CPIM..!!

    ಪುತ್ತೂರು : ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷತ್ (VHP) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಭಾಗಿಯಾಗಿರುವುದಕ್ಕೆ ಸಿಪಿಐಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

    ಜಾತ್ಯಾತೀತ ಕಾಂಗ್ರೆಸ್‌ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಸಿಪಿಐಎಂ ಆಗ್ರಹಿಸಿದೆ. ಈ ಬಗ್ಗೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿರುವ ಸಿಪಿಐಎಂ ಮುಖಂಡ ಬಿ.ಎಂ.ಭಟ್ ವಿಶ್ವ ಹಿಂದೂ ಪರಿಷತ್ ಆರ್‌ಎಸ್.ಎಸ್ ನ ಒಂದು ಅಂಗಸಂಸ್ಥೆಯಾಗಿದೆ. ಈ ಎರಡೂ ಸಂಘಟನೆಗಳು ದೇಶದಲ್ಲಿ ಕೋಮುವಾದವನ್ನು ಹರಡುತ್ತಿದೆ. ಈ ಸಂಘಟನೆಗಳು ಎಲ್ಲಾ ಹಿಂದುಗಳನ್ನು ಪ್ರತಿನಿಧಿಸುವುದಿಲ್ಲ ಮತ್ತು ಎಲ್ಲಾ ಹಿಂದೂಗಳು ಆ ಸಂಘಟನೆಗಳ ಸದಸ್ಯರಲ್ಲ. ಹೀಗಿರುವಾಗ ಜಾತ್ಯಾತೀತ ನಿಲುವಿನ ಕಾಂಗ್ರೆಸ್ ಪಕ್ಷದಲ್ಲಿ ಆಯ್ಕೆಯಾದ ಶಾಸಕ ಆ ಕಾರ್ಯಕ್ರಮದಲ್ಲಿ ಭಾಗಿಯಾದ ಉದ್ಧೇಶವೇನು ? ಎಂದು ಪ್ರಶ್ನಿಸಿದ್ದಾರೆ. ಅಲ್ಪಸಂಖ್ಯಾತರು,ಪ್ರಗತಿಪರರು ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದರಿಂದ ಅವರು ಶಾಸಕರಾಗಿ ಗೆದ್ದು ಬಂದಿದ್ದಾರೆ. ಆದರೆ ಇದೀಗ ವಿ.ಎಚ್.ಪಿ ಕಾರ್ಯಕ್ರಮಕ್ಕೆ ತೆರಳಿರುವುದು ಅಕ್ಷಮ್ಯ. ಶಾಸಕನ ಈ ನಡೆಗೆ ಕಾಂಗ್ರೆಸ್ ಪಕ್ಷ ಉತ್ತರಿಸಬೇಕು ಎಂದು ಬಿ.ಎಂ.ಭಟ್ ಆಗ್ರಹ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply