LATEST NEWS
ಎಂಕೋಡಿ ಸಮುದ್ರ ತೀರದಲ್ಲಿ ಈಜಲು ಹೋಗಿ ಕೂಲಿಕಾರ್ಮಿಕ ನೀರು ಪಾಲು

ಕುಂದಾಪುರ ನವೆಂಬರ್ 23: ಕುಂದಾಪುರ ಸಮೀಪದ ಎಂಕೋಡಿ ಸಮುದ್ರ ತೀರದಲ್ಲಿ ಸ್ನಾನಕ್ಕೆಂದು ತೆರಳಿದ್ದ ಕೂಲಿಕಾರ್ಮಿಕನೊಬ್ಬ ನೀರುಪಾಲಾದ ಘಟನೆ ನಡೆದಿದೆ. ಮೃತನನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಮಂಜುನಾಥ (33) ಎಂದು ಗುರುತಿಸಲಾಗಿದೆ.
ಕುಂದಾಪುರ ಪರಿಸರದಲ್ಲಿ ಕೂಲಿ ಕಾರ್ಮಿಕರಾಗಿ ದುಡಿದುಕೊಂಡಿದ್ದ ಮೃತ ಮಂಜುನಾಥ ಹಾಗೂ ಆತನ ಸ್ನೇಹಿತ ಮಂಜುನಾಥ ಎನ್ನುವವರು ಕೆಲಸ ಇಲ್ಲದ ಕಾರಣ ಕುಂದಾಪುರ ಸಮೀಪದ ಎಂ ಕೋಡಿಗೆ ಸ್ನಾನಕ್ಕೆಂದು ತೆರಳಿದ್ದರು. ಇಬ್ಬರು ಅರಬ್ಬಿ ಸಮುದ್ರಕ್ಕೆ ಇಳಿದ್ದಿದ್ದು ಅಲೆಯ ರಭಸಕ್ಕೆ ಮಂಜುನಾಥ ಎನ್ನುವರು ಸಮುದ್ರದಲ್ಲಿ ಮುಳುಗಿದ್ದು, ಇನ್ನೊರ್ವ ಸಾವಿನ ಅಂಚಿನಿಂದ ಪಾರಾಗಿದ್ದಾನೆ.

ಸ್ಥಳೀಯರ ಸಹಕಾರದಿಂದ ಮೃತ ಯುವಕನ ಶವವನ್ನು ಮೇಲಕ್ಕೆ ಎತ್ತಿದ್ದು, ಕುಂದಾಪುರದ ಶವಗಾರದಲ್ಲಿ ಇರಿಸಲಾಗಿದೆ. ಕುಂದಾಪುರ ಪೋಲಿಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.