LATEST NEWS
ಬಿಜೆಪಿ ನಾಯಕರಿಗೆ ಮಿಥುನ್ ರೈ #ಚಿನ್ನದರಸ್ತೆ ಚಾಲೆಂಜ್

ಮಂಗಳೂರು ನವೆಂಬರ್ 4: 20 ವರ್ಷಗಳ ಬಳಿಕ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಾಕಾರಿಣಿಗೆ ಆಗಮಿಸುತ್ತಿರುವ ರಾಜ್ಯ ಬಿಜೆಪಿ ಮುಖಂಡರುಗಳಿಗೆ ಕಾಂಗ್ರೇಸ್ ಯುವ ಮುಖಂಡ ಮಿಥುನ್ ವಿಭಿನ್ನ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ.
ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಗಳಿಂದಾಗಿ ಜನ ಬೇಸತ್ತಿರುವ ಹಿನ್ನಲೆ ಟ್ವೀಟ್ ಮಾಡಿರುವ ಮಿಥುನ್ ರೈ ನವೆಂಬರ್ 5 ರಂದು ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಭಾಗವಹಿಸಲು ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸುವ ಬಿಜೆಪಿ ನಾಯಕರು ಹಾಗೂ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಸಕಲೇಶಪುರ ಮೂಲಕ ರಾಷ್ಟ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ಮೂಲಕ ಆಗಮಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು ಈ ರಸ್ತೆಯಲ್ಲಿ ಆಗಮಿಸಿ ರೋಡ್ ಚಾಲೆಂಜ್ ಹಾಗೂ ಚಿನ್ನದ ರಸ್ತೆ ಎಂದು ಹ್ಯಾಶ್ ಟ್ಯಾಗ್ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ. 20 ವರ್ಷಗಳ ಬಳಿಕ ನವೆಂಬರ್ 5 ರಂದು ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯುತ್ತಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೇಂದ್ರ ಸಚಿವರಾದ ಡಿವಿಎಸ್ ಹಾಗೂ ಪ್ರಹ್ಲಾದ್ ಜೋಶಿ ಪಾಲ್ಗೊಳ್ಳಲಿದ್ದಾರೆ.