DAKSHINA KANNADA
ಚಾರಣಕ್ಕೆ ತೆರಳಿ ಕುಮಾರಪರ್ವತದಲ್ಲಿ ನಾಪತ್ತೆಯಾಗಿದ್ದ ಸಂತೋಷ್ ಸುರಕ್ಷಿತವಾಗಿ ಪತ್ತೆ

ಸುಬ್ರಹ್ಮಣ್ಯ
ಚಾರಣಕ್ಕೆ ತೆರಳಿ ಕುಮಾರಪರ್ವತದಲ್ಲಿ ನಾಪತ್ತೆಯಾಗಿದ್ದ ಸಂತೋಷ್ ಸುರಕ್ಷಿತವಾಗಿ ಪತ್ತೆ
ಪುತ್ತೂರು ಸೆಪ್ಟೆಂಬರ್ 17: ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಸಂತೋಷ್ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ.
ಬೆಂಗಳೂರು ಮೂಲದ ಗಾಯತ್ರಿ ನಗರದ ನಿವಾಸಿ ಸಂತೋಷ್ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ಶುಕ್ರವಾರ ಕುಕ್ಕೆಯಿಂದ ತೆರಳಿದ್ದರು. 12 ಮಂದಿ ತಂಡದೊಂದಿಗೆ ತೆರಳಿದ್ದ ಸಂತೋಷ ಕಾಡಿನ ಮಧ್ಯೆ ತಂಡದಿಂದ ಬೇರ್ಪಟ್ಟು ನಾಪತ್ತೆಯಾಗಿದ್ದರು. ತಂಡದಿಂದ ಬೇರ್ಪಟ್ಟು ನಾಪತ್ತೆಯಾದ ಬಳಿಕ ಕಾಡಿನಲ್ಲಿ ಮರೆಯಾದ ಸಂತೋಷ್ ದೇಗುಲಕ್ಕೆ ಕಾಡಿನಿಂದ ನೀರು ಸರಬರಾಜಿಗೆ ಅಳವಡಿಸಿದ್ದ ಪೈಪುಗಳ ಮೂಲಕವೆ ಸಾಗಿ ಬಂದು ದೇವರಗದ್ದೆ ತಲುಪಿದ್ದಾನೆ.

ಶುಕ್ರವಾರ ಕುಕ್ಕೆಯಿಂದ ಚಾರಣಕ್ಕೆ ತೆರಳಿದ್ದ 12 ಮಂದಿ ತಂಡ ರವಿವಾರ ಹಿಂತಿರುಗುತ್ತಿದ್ದ ವೇಳೆ ಸಂತೋಷ್ ತಪ್ಪಿಸಿಕೊಂಡಿದ್ದ. ತಂಡದಲ್ಲಿದ್ದ 5 ಮಂದಿ ಎದುರಿಗೆ ಇದ್ದು ಮಧ್ಯದಲ್ಲಿ ಸಂತೋಷ್, ಅವರ ಹಿಂದಿನಿಂದ ಆರು ಜನರು ಬರುತ್ತಿದ್ದರು. ಈ ನಡುವೆ ಕೇವಲ ಹತ್ತು ನಿಮಿಷದ ಅಂತರದಲ್ಲಿ ಸಂತೋಷ್ ಕಾಣೆಯಾಗಿದ್ದ.
ಈಗ ಸುರಕ್ಷಿತವಾಗಿ ಬಂದಿರುವ ಸಂತೋಷ್ “ದಾರಿ ತಪ್ಪಿದ್ದರಿಂದ ನಾನು ಎರಡು ರಾತ್ರಿ ಕಾಡಿನಲ್ಲೇ ಕಳೆದೆ. ಬಂಡೆಕಲ್ಲುಗಳ ಮೇಲೆ ಮಲಗಿದ್ದು ಅಲ್ಲೆ ತೊರೆಯ ನೀರನ್ನು ಕುಡಿದು ಹಸಿವು ನೀಗಿಸಿಕೊಂಡಿದ್ದೆ. ಯಾವುದೇ ಕಾಡು ಪ್ರಾಣಿಗಳು ಎದುರಾಗಲಿಲ್ಲ” ಎಂದು ತಿಳಿಸಿದ್ದಾರೆ.
ಉರಿಗೆ ಬರುವ ದಾರಿ ಹುಡುಕುತ್ತಾ ಕಾಡಿನಲ್ಲಿ ಅಲೆದಾಡುವಾಗ ಪೈಪ್ ಪೈನ್ ಕಾಣಿಸಿತು. ಇದು ಯಾವುದಾದರು ಒಂದು ಊರಿಗೆ ಖಂಡಿತ ಸೇರುವುದೆಂಬ ನಂಬಿಕೆಯಿಂದ ಅದೇ ಪೈಪ್ ಲೈನ್ ಅನ್ನು ಅನುಸರಿಸುತ್ತಾ ಬಂದೆ ಎಂದು ಸಂತೋಷ್ ಕಾಡಿನಿಂದ ಹೊರಬಂದ ರೀತಿಯನ್ನು ವಿವರಿಸಿದರು.