Connect with us

    DAKSHINA KANNADA

    ವಿಟ್ಲ -ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ವಿಧ್ಯಾರ್ಥಿಗಳು ಪುತ್ತೂರಿನಲ್ಲಿ ಪತ್ತೆ

    ವಿಟ್ಲಅಗಸ್ಟ್ 23: ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಿಂದ ನಾಪತ್ತೆಯಾಗಿದ್ದ ಇಬ್ಬರು ವಿಧ್ಯಾರ್ಥಿಗಳು ಮಂಗಳವಾರ ಬೆಳಿಗ್ಗೆ ಪುತ್ತೂರಿನಲ್ಲಿ ಪತ್ತೆಯಾಗಿದ್ದಾರೆ.


    ನಾಪತ್ತೆಯಾಗಿದ್ದ ದೀಕ್ಷಿತ್ (15) ಮತ್ತು ಗಗನ್ (14) ಎಂಬ ವಿಧ್ಯಾರ್ಥಿಗಳು ಅಗಸ್ಟ್ 21ರಂದು ಶಾಲೆಗೆಂದು ವಿದ್ಯಾರ್ಥಿ ನಿಲಯದಿಂದ ತೆರಳಿದ್ದವರು ಮತ್ತೆ ವಾಪಾಸ್ ವಿಧ್ಯಾರ್ಥಿ ನಿಲಯಕ್ಕೆ ಬಂದಿರಲಿಲ್ಲ. ಈ ಹಿನ್ನಲೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಪ್ರಮೀಳಾ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಪ್ರಕರಣ ದಾಖಲಿಸಿಕೊಂಡಿದ್ದ ವಿಟ್ಲ ಪೊಲೀಸರು ವಿದ್ಯಾರ್ಥಿಗಳನ್ನು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ. ಹಾಸ್ಟೆಲ್‌ನಲ್ಲಿ ನಿಲ್ಲಲು ಇಷ್ಟವಾಗದ ಕಾರಣ ದೀಕ್ಷಿತ್‌ ಮತ್ತು ಗಗನ್ ಮನೆ ಕಡೆಗೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಗೆ ಕರೆ ತಂದ ಪೊಲೀಸರು ಅವರ ಮನವೊಲಿಸಿ ಮತ್ತೆ ಹಾಸ್ಟೆಲ್‌ಗೆ ಕಳುಹಿಸಿಕೊಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply