Connect with us

    DAKSHINA KANNADA

    ನಾಪತ್ತೆಯಾಗಿದ್ದ ಸಂದೀಪ್ ಗೌಡ ಮೃತದೇಹ ಕಾಡಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

    ಕಡಬ, ಡಿಸೆಂಬರ್ 02: ಕಳೆದ ಕೆಲ ದಿನಗಳ ಹಿಂದೆ ಕೆಲಸಕ್ಕೆಂದು ಹೋಗಿ ನಾಪತ್ತೆಯಾಗಿದ್ದ ಸಂದೀಪ್ ಗೌಡ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಾಡಿನಲ್ಲಿ ಪತ್ತೆಯಾಗಿದೆ.


    ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್‌ ಗೌಡ (29) ಕೆಲಸಕ್ಕೆಂದು ಹೋದವನು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸಂದೀಪ್ ಗೌಡ ಶವ ಪತ್ತೆಯಾಗಿದೆ. ಇನ್ನು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರತೀಕ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ನವಂಬರ್ 27 ರಿಂದ ನಾಪತ್ತೆಯಾಗಿದ್ದ ಯುವಕನನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಡಲಾಗಿದೆ ಎಂದು ಹೇಳಲಾಗಿದೆ. ಮರ್ಧಾಳ ನಿವಾಸಿ ಸಂದೀಪ್ (21) ಕೊಲೆಗೀಡಾದ ಯುವಕನಾಗಿದ್ದು, ಪ್ರತೀಕ್ ಎನ್ನುವಾತ ಈತನನ್ನು ಕೊಲೆ ಮಾಡಿರುವುದಾಗಿ ಪೋಲೀಸರು ಸ್ಪಷ್ಟಪಡಿಸಿದ್ದಾರೆ. ಮರ್ಧಾಳದಲ್ಲಿ ಶಾಮಿಯಾನ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಸಂದೀಪ್ ನನ್ನು ಪ್ರತೀಕ್ ನವೆಂಬರ್ 27 ರಂದು ತನ್ನ ಕಾರಿನಲ್ಲಿ ಕರೆದೊಯ್ದ ಬಗ್ಗೆ ಶಾಮಿಯಾನದ ಅಂಗಡಿ ಮಾಲಕ ಪೋಲೀಸರಿಗೆ ನೀಡಿದ ಮಾಹಿತಿ ಹಿನ್ನಲೆಯಲ್ಲಿ ಪೋಲೀಸರು ಪ್ರತೀಕ್ ನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. ತನಿಖೆಯ‌ ವೇಳೆ ಸಂದೀಪ್ ನನ್ನು ಕೊಲೆ ಮಾಡಿರುವುದನ್ನು ಆರೋಪಿ ಒಪ್ಪಿಕೊಂಡಿದ್ದು, ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ.

    ನಾಪತ್ತೆಯಾಗಿದ್ದ ಸಂದೀಪ್ ಗಾಗಿ ಆತನ ಮನೆಮಂದಿ ಹುಡುಕಾಟ ನಡೆಸಿದ್ದು, ಈ ಬಗ್ಗೆ ಕಡಬ ಪೋಲೀಸ್ ಠಾಣೆಗೆ ದೂರು ನೀಡಲೂ ಸಂದೀಪ್ ತಾಯಿ ಸರೋಜ ತೆರಳಿದ್ದರು. ಈ ಸಂದರ್ಭದಲ್ಲಿ ಪೋಲೀಸರು ಆಕೆಯನ್ನು ಬೆದರಿಸಿ ದೂರು‌ ಸ್ವೀಕರಿಸಲು ನಿರಾಕರಿಸಿದ್ದರು ಎನ್ನುವ ಆರೋಪವನ್ನೂ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಮಾಡಿದ್ದಾರೆ. ಈ ನಡುವೆ ಆರೋಪಿ ಪ್ರತೀಕ್, ಸಂದೀಪ್ ನಾಪತ್ತೆಯಾಗಿರುವ ವಿಚಾರವನ್ನು ಊರೆಲ್ಲಾ ಹರಡಿದ್ದು, ತನಗೂ, ಸಂದೀಪ್ ನ ನಾಪತ್ತೆ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಬಿಂಬಿಸಲು ಪ್ರಯತ್ನಿಸಿದ್ದಾನೆ‌. ಆದರೆ ಆತನ ಈ ವರ್ತನೆಯೇ ಗ್ರಾಮಸ್ಥರಲ್ಲಿ ಹಲವು ಸಂಶಯಕ್ಕೆ ಕಾರಣವಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಕಡಬ ಪೋಲೀಸ್ ಠಾಣೆಗೆ ತೆರಳಿ, ಪ್ರತೀಕ್ ನನ್ನು ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದರು. ಈ ಕಾರಣಕ್ಕೆ ಪ್ರತೀಕ್ ನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ತನ್ನ ಕೃತ್ಯವನ್ನು ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಪ್ರತೀಕ್ ಮತ್ತು ಆತನ ಸ್ನೇಹಿತರು ನೆಟ್ಟಣ ಸಮೀಪದ ಕೊಣಾಜೆ ಕಾಡಿನಲ್ಲಿ ಸಂದೀಪ್ ನನ್ನು ಕೊಂದು, ಶವಕ್ಕೆ ಪೆಟ್ರೋಲ್ ಸುರಿದಿರುವ ವಿಚಾರವನ್ನು ಆರೋಪಿ ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.


    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆಯಿಂದಲೇ ಯುವಕನ ಕೊಲೆ ಮಾಡಲಾಗಿದೆ ಎಂಬ ಶಂಕೆಯಲ್ಲಿ ಗ್ರಾಮಸ್ಥರು ನೆಟ್ಟಣ ಪರಿಸರದಲ್ಲಿ ಶವ ಹುಡುಕಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಗ್ರಾಮಸ್ಥರಿಗೆ ಹುಡುಕದಂತೆ ತಾಕೀತು ಮಾಡಿದ್ದರು. ಈ ವೇಳೆ ಪೊಲೀಸರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಯುವಕ ನಾಪತ್ತೆಯಾದ ಸಂದರ್ಭ ದೂರು ನೀಡಲು ಹೋದಾಗ ದೂರು ಪಡೆಯಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಇದೇ ವಿಚಾರದಲ್ಲಿ ಪೋಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು.

    ಕೊಲೆಯ ಹಿಂದೆ ಗಾಂಜಾ ಮಾಫಿಯಾದ ಕೈವಾಡವಿದೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ. ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *