DAKSHINA KANNADA
ಬೇಟೆಗೆಂದು ಹೋದ ಗೆಳೆಯರು ಕಾಡಂಚಿನಲ್ಲಿ ಹೆಣವಾಗಿ ಸಿಕ್ಕರು
ಬೇಟೆಗೆಂದು ಹೋದ ಗೆಳೆಯರು ಕಾಡಂಚಿನಲ್ಲಿ ಹೆಣವಾಗಿ ಸಿಕ್ಕರು
ಮಂಗಳೂರು ಮಾರ್ಚ್ 22: ಬೇಟೆಗೆಂದು ಹೋದ ಗೆಳೆಯರಿಬ್ಬರು ನಾಪತ್ತೆ ಪ್ರಕರಣ ಅವರ ಸಾವಿನಲ್ಲಿ ಅಂತ್ಯವಾಗಿದೆ. ಯುವಕರಿಬ್ಬರ ಮೃತದೇಹ ಕರಿಂಜೆ ಕಾಡಿನಲ್ಲಿ ಪತ್ತೆಯಾಗುವುದರ ಮೂಲಕ ನಾಪತ್ತೆ ಪ್ರಕರಣ ದುರಂತದಲ್ಲಿ ಅಂತ್ಯಕಂಡಿದೆ.
ಮೂಡುಬಿದ್ರೆ ನಿವಾಸಿ ಗಳಾದ ಪ್ರವೀಣ್ ತೌರೋ(33) ಹಾಗು ಗ್ರೆಷನ್ (32) ಮೂಡುಬಿದ್ರೆ ಇಂದ 10ಕಿ ಮೀ ದೂರದ ಕರಿಂಜೆ ಕಾಡಿಗೆ ಬೇಟೆಗೆಂದು ಕಳೆದ ಸೋಮವಾರ ರಾತ್ರಿ ತೆರಳಿದ್ದರು. ನಂತರ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದರು, ಅಲ್ಲದೇ ಅವರ ಮೊಬೈಲ್ ಕೂಡ ಸ್ವಿಚ್ಚ ಆಫ್ ಆಗಿತ್ತು.
ಈ ಹಿನ್ನಲೆಯಲ್ಲಿ ಯುವಕರ ಮನೆಯವರು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಮೂಡಬಿದಿರೆ ಪೊಲೀಸರಿಗೆ ಇಂದು ಬೆಳಿಗ್ಗೆ ಪ್ರವೀಣ್ ಹಾಗು ಗ್ರೆಷನ್ ಬೇಟೆಗೆ ತರಳುವ ಸಂದರ್ಭದಲ್ಲಿ ಬಳಸಿದ್ದ ಜೀಪ್ ಕಾಡಿನಂಚಿನಲ್ಲಿ ಪತ್ತೆಯಾಗಿತ್ತು. ಆದರೆ ಕಾಡಿಗೆ ತೆರಳಿದ್ದ ಯುವಕು ಏನಾದರು ಎಂಬ ಮಾಹಿತಿ ಕುಟುಂಬ ಸದಸ್ಯರಿಗೆ ಲಭ್ಯವಾಗಿರಲಿಲ್ಲ. ಈ ನಡುವೆ ಇಬ್ಬರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು ಯುವಕರ ಮನೆಯವರಲ್ಲಿ ಆತಂಕ ಮೂಡಿಸಿತ್ತು.
ಯುವಕರು ನಾಪತ್ತೆ ಯಾದ ಕುರಿತು ಪ್ರವೀಣ್ ಹಾಗು ಗ್ರೆಷನ್ ಕುಟುಂಬಸ್ಥರು ಸ್ತಳೀಯ ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ಕಾಡಿನಲ್ಲಿ ನಾಮತ್ತೆಯಾಗಿರುವ ಯುವಕರಿಗಾಗಿ ಇಂದು ಮುಂಜಾನೆ ಮೂಡಬಿದ್ರೆ ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದ್ದರು. ಈ ನಡುವೆ ಕಾಡಂಚಿನ ತೋಟದ ಪಕ್ಕ ಪ್ರವೀಣ್ ತೌರೋ , ಗ್ರೆಷನ್ ಅವರ ಮೃತ ದೇಹ ಪತ್ತೆಯಾಗಿದೆ.
ಕಾಡಿನಲ್ಲಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಈ ಇಬ್ಬರು ಯುವಕರು ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕಾಡಂಚಿನ ತೋಟಗಳಲ್ಲಿ ಕಾಡು ಪ್ರಾಣಿಗಳು ತೋಟ ಪ್ರವೇಶಿಸದಂತೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಯುವಕರು ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಮೃತ ಪಟ್ಟಿರುವ ಪ್ರವೀಣ್ ತೌರೋ ಖಾಸಗಿ ಟೆಂಪೊ ಚಾಲಕನಾಗಿದ್ದು ಅವಿವಾಹಿತನಾಗಿದ್ದ , ಮೂಡಬಿದ್ರೆಯಲ್ಲಿ ಸರ್ವಿಸ್ ಸ್ಟೇಷನ್ ಮಾಲಕನಾಗಿರುವ ಗ್ರೇಷನ್ ವಿವಾಹಿತರಾಗಿದ್ದು ಓರ್ವ ಪುತ್ರಿ ಇದ್ದಾಳೆ