Connect with us

    DAKSHINA KANNADA

    ಸುಳ್ಯ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಮದುವೆಯಾಗಿ ಪತ್ತೆಯಾದ ಜೋಡಿ

    ಬೆಂಗಳೂರಿನ ನೆಲಮಂಗಲದಲ್ಲಿ ಪತ್ತೆಯಾದ ಜೋಡಿ

    ಸುಳ್ಯ ಜೂನ್ 10: ಸುಳ್ಯದಲ್ಲಿ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವ ಜೋಡಿಯೊಂದು ಮದುವೆಯಾಗಿ ಬೆಂಗಳೂರಿನ ನೆಲಮಂಗಲ ಕಡೆ ಪತ್ತೆಯಾಗಿದ್ದಾರೆ. ಸುಳ್ಯದ ಹರಿಹರ ಪಲ್ಲತಡ್ಕ ಗ್ರಾಮದ ಕಲ್ಲೆಮಠದ ಯುವತಿ ಲಿಖಿತಾ ಮತ್ತು ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿ ಗೌಡಮನೆಯ ಅಭಿಲಾಷ್ ಎಂಬವರು ಕೆಲವು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು.

    ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿತ್ತು. ಇದೀಗ ಸುಬ್ರಹ್ಮಣ್ಯ ಪೊಲೀಸರು ನೆಟ್ವರ್ಕ್ ಆಧಾರದಲ್ಲಿ ಬೆಂಗಳೂರಿನಲ್ಲಿ ಇವರನ್ನು ಪತ್ತೆ ಹಚ್ಚಿದ್ದು, ಇವರಿಬ್ಬರು ಮದುವೆಯಾಗಿರುವುದಾಗಿ ತಿಳಿದುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply