LATEST NEWS
ವಿಶ್ವಸುಂದರಿ ಸ್ಪರ್ಧೆಗೆ ಕೊರೊನಾ ಸಂಕಟ – ಫೈನಲ್ ಸ್ಪರ್ಧೆ ತಾತ್ಕಾಲಿಕ ಮುಂದೂಡಿಕೆ
ಸ್ಯಾನ್ ಜುವಾನ್: ಕೊರೊನಾ ಇದೀಗ ವಿಶ್ವಸುಂದರಿ ಸ್ಪರ್ಧೆಗೆ ಕಂಟಕ ತಂದಿದ್ದು, ವಿಶ್ವಸುಂದರಿ 2021ರ ಸ್ಪರ್ಧೆಯ ಫೈನಲ್ ನಲ್ಲಿ ಪಾಲ್ಗೊಂಡಿದ್ದ ಸುಂದರಿಯರಲ್ಲಿ ಕೆಲವರಿಗೆ ಕೊರೊನಾ ಕಾಣಿಸಿಕೊಂಡ ಪರಿಣಾಮ ಫೈನಲ್ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಡಿಸೆಂಬರ್ 16 ರಂದು ಫಿನಾಲೆ ಪೋರ್ಟೊ ರಿಕೊದಲ್ಲಿ ನಡೆಯಬೇಕಿತ್ತು. ಕೊರೋನಾ ಸೋಂಕು ಕಾರಣದಿಂದ ವಿಶ್ವ ಸುಂದರಿ 2021 ಅಂತಿಮ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಸ್ಪರ್ಧಿಗಳು, ಸಿಬ್ಬಂದಿ ಹಾಗೂ ಸಾಮಾನ್ಯ ಜನರ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಸಂಘಟಕರು ಕಾರ್ಯಕ್ರಮ ಮುಂದೂಡಿದ್ದು, ಮುಂದಿನ 90 ದಿನಗಳಲ್ಲಿ ಪೋರ್ಟೊ ರಿಕೊದ ಜೋಸ್ ಮಿಗುಯೆಲ್ ಆಗ್ರೊಲೊಟ್ ಕೊಲಿಸಿಯಂನಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ಸಮಾರೋಪದ ವೇಳಾಪಟ್ಟಿ ನಿಗದಿಪಡಿಸುವುದಾಗಿ ಪ್ರಕಟಿಸಿದ್ದಾರೆ.
ಈ ನಡುವೆ ಮಿಸ್ ವರ್ಲ್ಡ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಸುಂದರಿ ಮಾನಸ ವಾರಾಣಸಿ ಅವರಿಗೂ ಕೋವಿಡ್ ತಗುಲಿರುವುದನ್ನು ಮಿಸ್ ಇಂಡಿಯಾ ಸಂಸ್ಥೆ ಖಚಿತಪಡಿಸಿದೆ. ಮಿಸ್ ವರ್ಲ್ಡ್ 2021 ಸ್ಪರ್ಧಿಗಳು ಸೇರಿದಂತೆ 17 ಮಂದಿ ಸಿಬ್ಬಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. 23 ವರ್ಷದ ಮಾನಸಾ ವಾರಣಾಸಿ 70 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.