FILM
ಇನ್ಸ್ಟಾ ಗ್ರಾಂ ನಲ್ಲಿ ಪಾಲೋವರ್ಸ್ ಕಡಿಮೆಯಾಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

ಮುಂಬೈ ಮೇ 01: ಸೋಶಿಯಲ್ ಮಿಡಿಯಾ ಕಂಟೆಂಟ್ ಕ್ರಿಯೆಟರ್ಸ್ ಮಿಶಾ ಅಗರ್ವಾಲ್ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಇನ್ಸ್ಟಾ ಗ್ರಾಂ ನಲ್ಲಿ ಪಾಲೋವರ್ಸ್ ಕಡಿಮೆಯಾಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಕುಟುಂಬ ತಿಳಿಸಿದೆ.
ಸೋಶಿಯಲ್ ಮಿಡಿಯಾ ಕಂಟೆಂಟ್ ಕ್ರಿಯೆಟರ್ ಮಿಶಾ ಅಗರ್ವಾಲ್ ತಮ್ಮ ಹುಟ್ಟುಹಬ್ಬಕ್ಕೆ ಮುನ್ನಾದಿನ ಆತ್ಮಹತ್ಯೆಗೆ ಶರಣಾಗಿದ್ದರು. 24 ವಯಸ್ಸಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಕ್ಕೆ ಕಾರಣಗಳು ಮಾತ್ರ ನಿಗೂಢವಾಗಿತ್ತು. ಇದೀಗ ಮಿಶಾ ಅವರ ಕುಟುಂಬ ಆಕೆ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿಸಿದೆ.

ಮಿಶಾ ಇನ್ಸ್ಟಾಗ್ರಾಂ ನಲ್ಲಿ 10 ಲಕ್ಷ ಪಾಲೋವರ್ಸ್ ಹೊಂದಬೇಕೆಂದು ಕನಸು ಕಂಡಿದ್ದರು, ಅಲ್ಲದೆ ತನ್ನ ಮೊಬೈಲ್ ಸ್ಕ್ರೀನ್ ಶಾಟ್ ನಲ್ಲೂ ಅದೇ ರೀತಿ ವಾಲ್ ಪೆಪರ್ ಕ್ರಿಯೆಟ್ ಮಾಡಿಕೊಂಡಿದ್ದರು, ಆದರೆ ಇತ್ತೀಚೆಗೆ ಅವರ ಇನ್ಸ್ಟಾಗ್ರಾಂ ಪಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬಂದಿತ್ತು, ಇದು ಮಿಶಾ ಅವರನ್ನು ಖಿನ್ನತೆಗೆ ಒಳಪಡಿಸಿತ್ತು. ಇದೇ ಕಾರಣಕ್ಕೆ ಆಕೆಯ ತನ್ನ ಜೀವವನ್ನೆ ಮುಗಿಸಿಕೊಂಡಿದ್ದಾಳೆ.
ಈ ಬಗ್ಗೆ ಮಿಶಾ ಸಹೋದರ ಹಾಕಿರುವ ಇನ್ಸ್ಟಾ ಗ್ರಾಂ ಪೋಸ್ಟ್ ನಲ್ಲಿ “ನನ್ನ ಪುಟ್ಟ ತಂಗಿ ಇನ್‌ಸ್ಟಾಗ್ರಾಮ್ ಮತ್ತು ಅವಳ ಅನುಯಾಯಿಗಳ ಸುತ್ತ ತನ್ನ ಪ್ರಪಂಚವನ್ನು ನಿರ್ಮಿಸಿಕೊಂಡಿದ್ದಳು, 1 ಮಿಲಿಯನ್ ಅನುಯಾಯಿಗಳನ್ನು ತಲುಪುವುದು ಮತ್ತು ಪ್ರೀತಿಯ ಅಭಿಮಾನಿಗಳನ್ನು ಗಳಿಸುವುದು ಒಂದೇ ಗುರಿಯೊಂದಿಗೆ. ಅವಳ ಅನುಯಾಯಿಗಳು ಕಡಿಮೆಯಾಗಲು ಪ್ರಾರಂಭಿಸಿದಾಗ, ಅವಳು ವಿಚಲಿತಳಾದಳು ಮತ್ತು ತಾನು ನಿಷ್ಪ್ರಯೋಜಕಳೆಂದು ಭಾವಿಸಿದಳು. ಏಪ್ರಿಲ್‌ನಿಂದ, ಅವಳು ತೀವ್ರ ಖಿನ್ನತೆಗೆ ಒಳಗಾಗಿದ್ದಳು, ಆಗಾಗ್ಗೆ ನನ್ನನ್ನು ತಬ್ಬಿಕೊಂಡು ಅಳುತ್ತಿದ್ದಳು, ‘ಜಿಜ್ಜಾ, ನನ್ನ ಅನುಯಾಯಿಗಳು ಕಡಿಮೆಯಾದರೆ ನಾನು ಏನು ಮಾಡುತ್ತೇನೆ? ನನ್ನ ವೃತ್ತಿಜೀವನ ಮುಗಿಯುತ್ತದೆ’ ಎಂದು ಹೇಳುತ್ತಿದ್ದಳು” ಎಂದು ಮಿಶಾಳ ಕುಟುಂಬ ಹೇಳಿಕೆ ನೀಡಿದೆ. ಸೋಶಿಯಲ್ ಮಿಡಿಯಾ ಪಾಲೋವರ್ಸ್ ಗೆ ಬಾಳಿ ಬದುಕಬೇಕಾಗಿದ್ದು ಯುವತಿಯೊಬ್ಬಳು ಜೀವವನ್ನೆ ಕಳೆದುಕೊಂಡಿದ್ದಾಳೆ.