LATEST NEWS
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
ಉಡುಪಿ ಜುಲೈ 26: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಾರ್ಕಳದ ಕಸಬಾ ಗ್ರಾಮದಲ್ಲಿ ನಡೆದಿದೆ.
ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಬೆಳ್ಮಣ್ಣು ಉಜಾಲಾ ಹೊಟೆಲ್ ನ ಕ್ಯಾಶೀಯರ್ ಅಗಿ ಕೆಲಸ ನಿರ್ವಹಿಸುತ್ತಿದ್ದ ಸೂಡಾ ನಿವಾಸಿ ಸುಕೇಶ್ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.

ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ನಿವಾಸಿಯಾಗಿರುವ ಅಪ್ರಾಪ್ತೆ ಬಾಲಕಿ ಹುಟ್ಟುಹಬ್ಬ ಆಚರಿಸಲು ಉಜಲಾ ಹೋಟೆಲ್ ಗೆ ತೆರಳಿದ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸುಕೇಶ್ ಶೆಟ್ಟಿಗಾರ್ ಪರಿಚಯಲಾಗಿತ್ತು. ಈ ಪರಿಚಯ ನಂತರ ಪ್ರೇಮಕ್ಕೆ ತಿರುಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಆರೋಪಿ ಸುಕೇಶ್ ಎಂಬಾತ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಬಾಲಕಿಯನ್ನು ಮೂಡಬಿದ್ರೆ ಸಮೀಪದ ಖಾಸಗಿ ಲಾಡ್ಜವೊಂದರಲ್ಲಿ ಅಕೆಯೊಂದಿಗೆ ಬಲಾತ್ಕಾರವಾಗಿ ಅತ್ಯಾಚಾರ ಎಸಗಿದ್ದಾನೆ.
ಅಪ್ರಾಪ್ತೆ ಬಾಲಕಿ ಈಗ ಗರ್ಭವತಿಯಾಗಿದ್ದು ಈ ಹಿನ್ನಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸೆಗಿದ ಹಿನ್ನಲೆಯಲ್ಲಿ ಅರೋಪಿ ಸುಕೇಶ್ ಶೆಟ್ಟಿಗಾರ್ ಎಂಬಾತನ ವಿರುದ್ದ ನಗರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.