ಸುಪ್ರೀಂ ಫೀಡ್ಸ್ ನಲ್ಲಿ ಬೆಂಕಿ ಆಕಸ್ಮಿಕ
ಉಡುಪಿ ಜುಲೈ 26: ಬ್ರಹ್ಮಾವರದ ಸುಪ್ರೀಂ ಫೀಡ್ಸ್ ನಲ್ಲಿ ಆಕಸ್ಮಿಕ ಬೆಂಕಿ ಲಕ್ಷಾಂತರ ಮೌಲ್ಯದ ಎಣ್ಣೆ, ಹಿಂಡಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸುಪ್ರೀಂ ಫೀಡ್ಸ್ ನಲ್ಲಿ ಸೂರ್ಯಕಾಂತಿ ಬೀಜದಿಂದ ಎಣ್ಣೆ, ಹಿಂಡಿ ತಯಾರಿಸುವ ಘಟಕ ಇದಾಗಿದೆ.
ಸುಮಾರು 10 ಅಗ್ನಿ ಶಾಮಕ ವಾಹನಗಳ ಕಾರ್ಯಾಚರಣೆ ನಡೆಸಿದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.
