DAKSHINA KANNADA
ಸುಳ್ಯ – ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ – ಇಬ್ಬರು ಅರೆಸ್ಟ್…!!
ಸುಳ್ಯ ಜೂನ್ 26: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಮತ್ತೆ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಕೊಡಿಯಾಲದ ಚೇತನ್ ಕಾಯರ್ತಡ್ಕ, ದರ್ಶನ್ ಕಾಯರ್ತಡ್ಕ ಎಂದು ಗುರುತಿಸಲಾಗಿದೆ. ಸುಳ್ಯ ತಾಲೂಕಿನ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಬಾಲಕಿಯ ತಂದೆ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಕಲ್ಮಡ್ಕದ ಚಿದಾನಂದ ಎಂಬಾತನನ್ನು ಬಂಧಿಸಿದ್ದರು. ಇದೀಗ ವಿಚಾರಣೆ ಮುಂದುವರಿಸಿದ ಪೊಲೀಸರು ಬಾಲಕಿಯಿಂದ ಹೇಳಿಕೆ ಪಡೆಯುತ್ತಿರುವ ಸಂದರ್ಭ ಆಕೆ ಬೇರೆ ಬೇರೆ ಸಮಯದಲ್ಲಿ ಇನ್ನಿಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ ಹಿನ್ನೆಲೆಯಲ್ಲಿ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಕೊಡಿಯಾಲದ ಚೇತನ್ ಕಾಯರ್ತಡ್ಕ, ದರ್ಶನ್ ಕಾಯರ್ತಡ್ಕ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬೆಳ್ಳಾರೆ ಪೊಲೀಸರು ಫೋಕ್ಸೋ ಪ್ರಕರಣದ ದಾಖಲಿಸಿದ್ದಾರೆ.
You must be logged in to post a comment Login