Connect with us

    National

    ಕವಾಟವುಳ್ಳ ಎನ್ – 95 ಮಾಸ್ಕ್ ಸುರಕ್ಷಿತವಲ್ಲ ; ಹಾನಿಕಾರಕ : ಕೇಂದ್ರ ಸಲಹೆ

    ನವದೆಹಲಿ, ಜುಲೈ 21 : ಕೊರೊನಾ ವಿರುದ್ಧ ಬಳಕೆಗೆ ಸುರಕ್ಷಿತ ಎನ್ನಲಾಗುತ್ತಿದ್ದ ಎನ್ – 95 ಮಾಸ್ಕ್ ಬಗ್ಗೆ ಅಪಸ್ವರ ಕೇಳಿಬಂದಿದೆ. ಉಸಿರಾಟಕ್ಕೆ ಸುಲಭವಾಗಬಲ್ಲ ಕವಾಟ ಇರಿಸಿದ ಎನ್ – 95 ಮಾಸ್ಕ್ ಸುರಕ್ಷಿತವಲ್ಲ. ಇದು ಕೊರೊನಾ ವೈರಸ್ ಒಳಗೆ ಬರದಂತೆ ತಡೆಯಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

    ಕೇಂದ್ರ ಆರೋಗ್ಯ ಇಲಾಖೆ ಈ ಬಗ್ಗೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು ವೈದ್ಯಕೀಯ ಕ್ಷೇತ್ರದಲ್ಲಿರುವ ಆರೋಗ್ಯ ಕಾರ್ಯಕರ್ತರು ಕವಾಟವುಳ್ಳ ಎನ್ 95 ಮಾಸ್ಕ್ ಬಳಸದಂತೆ ಸೂಚನೆ ನೀಡುವಂತೆ ಸಲಹೆ ಮಾಡಿದೆ. ಉಸಿರಾಟಕ್ಕೆ ಸುಲಭವಾಗುವ ಕವಾಟ ಇರುವ ಎನ್ – 95 ಮಾಸ್ಕ್ ಧರಿಸುವುದು ದೇಹಕ್ಕೆ ಹಾನಿಕಾರಕ ಆಗಬಲ್ಲದು. ಇಂಥ ಮಾಸ್ಕ್ ಗಳಿಗೆ ಕೋವಿಡ್ ವೈರಸ್ ತಡೆಯುವ ಶಕ್ತಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಎನ್ 95 ಮಾಸ್ಕ್ ಗಳನ್ನು ಅಸುರಕ್ಷಿತವಾಗಿ ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.

    ಎನ್ 95 ಮಾಸ್ಕ್ ಹೆಚ್ಚು ಸುರಕ್ಷಿತ ಅನ್ನುವ ನೆಲೆಯಲ್ಲಿ ವೈದ್ಯರು, ನರ್ಸ್ ಗಳು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ಹೊಸತಾಗಿ ಕವಾಟ ಇರುವಂಥ ಮಾಸ್ಕ್ ಗಳನ್ನು ಮಾತ್ರ ಈಗ ಅಸುರಕ್ಷಿತ ಎನ್ನುವ ಸೂಚನೆ ನೀಡಲಾಗಿದೆ. ಫ್ಯಾಷನ್ ಆಗಿ ಇಂಥ ವಿಶೇಷ ರೀತಿಯ ಮಾಸ್ಕ್ ಗಳನ್ನು ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಬಳಕೆ ಮಾಡುತ್ತಿದ್ದಾರೆ.

    ಇದೇ ವೇಳೆ, ಮನೆಯಲ್ಲಿ ತಯಾರಿಸಿದ ದಪ್ಪ ಕಾಟನ್ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಉಪಯೋಗಿಸಬಹುದು ಎನ್ನುವುದನ್ನು ಸಲಹಾ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಬಟ್ಟೆಯ ಕಲರ್ ಯಾವುದೇ ಇರಬಹುದು. ಆದರೆ ಪ್ರತಿ ದಿನವೂ ಬಳಕೆ ಮಾಡಿದ ಬಳಿಕ ಈ ಮಾಸ್ಕ್ ಗಳನ್ನು ಕುದಿಯುವ ಬಿಸಿನೀರಿನಲ್ಲಿ ಐದು ನಿಮಿಷ ಮುಳುಗಿಸಿಟ್ಟು ಸ್ವಚ್ಛಗೊಳಿಸಬೇಕು. ಇದಕ್ಕೆ ಬೇಕಾದರೆ ನೀರಿಗೆ ಉಪ್ಪು ಬಳಸಬಹುದು. ಆನಂತರ ಸರಿಯಾಗಿ ಒಣಗಿಸಿ ಮರು ಬಳಕೆ ಮಾಡಬಹುದು. ಆದರೆ ಈ ಮಾಸ್ಕ್ ಗಳು ಮುಖದಲ್ಲಿ ಮೂಗು, ಬಾಯಿಯನ್ನು ಪೂರ್ತಿಯಾಗಿ ಮುಚ್ಚುವಂತಿರಬೇಕು ಎಂದು ಸಲಹೆ ಮಾಡಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *