Connect with us

MANGALORE

ನಾಡದೋಣಿ ಮೀನುಗಾರ ಅಹವಾಲು ಆಲಿಸಿದ ಸಚಿವ ಮಂಕಾಳ್ ವೈದ್ಯ

ಮಂಗಳೂರು ನವೆಂಬರ್ 28: ಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ಮೀನುಗರಿಕಾ ಜೆಟ್ಟಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ನಾಡದೋಣಿ ಮೀನುಗಾರರಿಗೆ ಅನುಕೂಲಕರವಾಗಿಲ್ಲ. ತಕ್ಷಣ ಬ್ರೇಕ್ ವಾಟರ್ ವಿಸ್ತರಣೆ ಸಹಿತ ಸರ್ವ ಋತು ಬಂದರು ಮಾಡಲು ಬೇಕಾದ ಕ್ರಮ ಕೈಗೊಳ್ಳ ಬೇಕು ಎಂಬ ಆಗ್ರಹದ ಹಿನ್ನಲೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ಮನವಿ ಮೇರೆಗೆ ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಬುಧವಾರ ಕಾಮಗಾರಿ ಸ್ಥಳಕ್ಕೆ ಭೇಟಿ ಮೀನುಗಾರರ ಸಭೆಯಲ್ಲಿ ಪಾಲ್ಗೊಂಡು ಅಹವಾಲು‌ ಆಲಿಸಿದರು.

ಐಐಟಿ ಚೆನ್ನೈ ನಿಂದ ವರದಿ ತಯಾರಿಸಿ ಬಳಿಕ ಕಾಮಗಾರಿ ಮುಂದುವರೆಸಲು ತೀರ್ಮಾನಿಸಲಾಯಿತು. ಶಾಸಕರು, ಹಾಗೂ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕಾಮಗಾರಿಯ ಕುರಿತಂತೆ ಸಚಿವರಿಗೆ ಮಾಹಿತಿ ನೀಡಿದರು. ನಾಡದೋಣಿ ಮೀನುಗಾರಿಕೆಗೂ ಅನುಕೂಲವಾಗುವಂತೆ ಜೆಟ್ಟಿ ನಿರ್ಮಾಣವಾಗಬೇಕು ಎಂದು ಮೀನುಗಾರರು ಮನವಿ ಮಾಡಿದರು. ಮೂಲ ಮೀನುಗಾರರ ಸಂಘ,ನಾಡದೋಣಿ ,ಎನ್ ಎಂ ಪಿ ಎ,ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *