Connect with us

    BELTHANGADI

    ಬೈಹುಲ್ಲು ತರುತ್ತಿದ್ದ ಮಿನಿ ಲಾರಿಗೆ ಆಕಸ್ಮಿಕ ಬೆಂಕಿ – ಸ್ಥಳೀಯರ ಸಾಹಸಕ್ಕೆ ಬೆಂಕಿಯಿಂದ ಬಚಾವ್ ಆದ ಲಾರಿ – ಚಾಲಕನ ಕಣ್ಣಲ್ಲಿ ನೀರು…!!

    ಬೆಳ್ತಂಗಡಿ ಎಪ್ರಿಲ್ 11: ಬೈಹುಲ್ಲು ಮಾರಾಟಕ್ಕೆ ಆಗಮಿಸುತ್ತಿದ್ದ ಮಿನಿ ಲಾರಿಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ನಡೆ ಬೆಳ್ತಂಗಡಿ ತಾಲ್ಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಮಾರು ಎಂಬಲ್ಲಿ ನಡೆದಿದ್ದು, ಸ್ಥಳೀಯರು ಸಾಹಸ ಪ್ರದರ್ಶಿಸಿ ಬೆಂಕಿಯನ್ನು ನಂದಿಸಿ ಲಾರಿಯನ್ನು ಉಳಿಸಿದ್ದಾರೆ.


    ಹಾಸನದ ಸಕಲೇಶಪುರದ ಬೈಹುಲ್ಲು ವ್ಯಾಪಾರಸ್ಥರೋರ್ವರು ಹೈನುಗಾರಿಕೆ ಮಾಡುವ ಕೃಷಿಕರ ಮನೆ ಮನೆಗೆ ಬೈ ಹುಲ್ಲನ್ನು ಹಾಕಲು ತನ್ನ ಮಿನಿ ಲಾರಿಯಲ್ಲಿ ಹುಲ್ಲನ್ನು ತರುವಾಗ ಬಟ್ಟೆ ಮಾರು ವಿನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಸ್ಥಳೀಯವರೊಬ್ಬರು ಬೊಬ್ಬೆ ಲಾರಿ ಚಾಲಕನಿಗೆ ಮಾಹಿತಿ ನೀಡಿದರು. ಕೂಡಲೇ ಲಾರಿಯವರು ಸ್ಥಳೀಯ ಕೃಷಿಕ ಪುರಂದರ ನಾಯ್ಕ ರವರ ಮನೆಯ ಬಳಿ ನಿಲ್ಲಿಸಿ ತಮ್ಮ ಕೊಳವೆ ಬಾವಿಯ ಪೈಪ್ ನಲ್ಲಿ ನೀರು ಹಾಕಿದರು.


    ಈ ವೇಳೆ ಬಟ್ಟೆಮಾರು ವಿನ ಎಸ್.ಎಸ್.ಎಫ್, ಕೆ.ಎಮ್.ಜೆ.ಎಸ್.ವೈ.ಎಸ್. ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ತಮ್ಮ ಮನೆಗಳಿಂದ ನೀರನ್ನು ತಂದು ಹಾಕಲು ಪ್ರಾರಂಭಿಸಿದರು. ಸ್ಥಳೀಯ ಅಂಗನವಾಡಿಯ ಕಾರ್ಯಕರ್ತೆ ಕೂಡಾ ನೀರು ಹಾಕಿ ನಂದಿಸಲು ಪ್ರಯತ್ನಿಸಿದರು.


    ಈ ವೇಳೆ ಅಗ್ನಿಶಾಮಕ ದಳದವರು ಆಗಮಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದರು. ಪಕ್ಕದಲ್ಲೆ ಕೆಲಸ ಮಾಡುತ್ತಿದ್ದ ಜೆ.ಸಿ.ಬಿ.ಯಿಂದ ಹುಲ್ಲನ್ನು ತೆರವು ಮಾಡಿದರು. ಒಟ್ಟಾರೆ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿ ಲಾರಿಯನ್ನು ಬೆಂಕಿಯಿಂದ ಬಚಾವ್ ಮಾಡಲಾಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *