Connect with us

    LATEST NEWS

    ತಾಯಿ ಮತ್ತು ಮಗುವನ್ನು ಬಲಿ ತೆಗೆದುಕೊಂಡ ಮೆಟ್ರೋ ಪಿಲ್ಲರ್

    ಬೆಂಗಳೂರು ಜನವರಿ 10: ಕಾಮಗಾರಿ ನಡೆಯುತಿದ್ದ ಮೆಟ್ರೋ ಪಿಲ್ಲರ್ ಒಂದು ಕುಸಿದು ಬಿದ್ದು ತಾಯಿ ಮತ್ತು ಮಗು ಸಾವನಪ್ಪಿರುವ ಘಟನೆ ಬೆಂಗಳೂರಿನ ನಾಗವಾರ ಬಳಿ ನಡೆದಿದೆ.


    ಮೃತರನ್ನು ತೇಜಸ್ವಿನಿ (23) ಹಾಗೂ ಅವರ ಎರಡೂವರೆ ವರ್ಷದ ಮಗು‌ ಮೃತ ಪಟ್ಟಿದೆ’ ಎಂದು ಗೊತ್ತಾಗಿದೆ. ನಾಗವಾರ – ಗೊಟ್ಟಿಗೆರೆ ಮಾರ್ಗದಲ್ಲಿ ಮೆಟ್ರೋ ಮಾರ್ಗ ಕಾಮಗಾರಿ ನಡೆಯುತ್ತಿತ್ತು. ನಾಗವಾರ ಬಳಿ (ಹೆಣ್ಣೂರು ಕ್ರಾಸ್) ಮೆಟ್ರೋ ಪಿಲ್ಲರ್ ನೆಲಕ್ಕೆ ಉರುಳಿ ಅವಘಡ ಸಂಭವಿಸಿದೆ.


    ಮಂಗಳವಾರ ಬೆಳಿಗ್ಗೆ 10.30 ಸುಮಾರಿಗೆ ಮೆಟ್ರೋ ಪಿಲ್ಲರ್ ಕುಸಿತವಾಗಿದೆ. ಗಾಯಗೊಂಡಿದ್ದ ತಾಯಿ-ಮಗು‌ ಆಸ್ಪತ್ರೆಯಲ್ಲಿ‌ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ‌ ನೀಡಿದ್ದಾರೆ. ‘ಮೃತ ತೇಜಸ್ವಿನಿ ಅವರು ಪತಿ ಹಾಗೂ ತನ್ನಿಬ್ಬರು ಅವಳಿ ಮಕ್ಕಳ ಜೊತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಪಿಲ್ಲರ್‌ ಅವರ ಬೈಕ್ ಮೇಲೆ ಬಿದ್ದಿತ್ತು. ತೇಜಸ್ವಿನಿ ಹಾಗೂ ಮಗು ವಿಹಾನ್ ಮೃತಟ್ಟಿದ್ದಾರೆ.
    ಮೆಟ್ರೋ ಪಿಲ್ಲರ್ ಕುಸಿದು ಮೃತಪಟ್ಟ ತೇಜಸ್ವಿನಿ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಬಿಎಂಆರ್‌ಸಿಎಲ್‌ ಎಂಡಿ ಅಜ್ಜುಂ ಪರ್ವೇಜ್ ಘೋಷಿಸಿದರು. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *