LATEST NEWS
ಮೆಸ್ಕಾಂ ಎಟಿಪಿ ಯಂತ್ರದಿಂದ 70 ಸಾವಿರ ದೋಚಿದ ಕಳ್ಳರು

ಮೆಸ್ಕಾಂ ಎಟಿಪಿ ಯಂತ್ರದಿಂದ 70 ಸಾವಿರ ದೋಚಿದ ಕಳ್ಳರು
ಮಂಗಳೂರು ಜನವರಿ 12: ಮೆಸ್ಕಾಂ ನ ಎಟಿಪಿ ಯಂತ್ರಕ್ಕೆ ಕನ್ನ ಹಾಕಿ 70 ಸಾವಿರ ರೂಪಾಯಿ ನಗದನ್ನು ದೋಚಿರುವ ಘಟನೆ ತೊಕ್ಕೊಟ್ಟುವಿನ ಚೆಂಬುಗುಡ್ಡೆ ಎಂಬಲ್ಲಿ ನಡೆದಿದೆ. ಚೆಂಬುಗುಡ್ಡೆಯ ಮೆಸ್ಕಾಂ ಉಪವಿಭಾಗದಲ್ಲಿ ಈ ಕಳ್ಳತನ ನಡೆದಿದೆ. ಈ ಯಂತ್ರದಲ್ಲಿ 9 ಲಕ್ಷ ರೂಪಾಯಿ ವರೆಗೂ ನಗದು ಇದ್ದು, ಶನಿವಾರ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ಕಳ್ಳರ ಪಾಲಾಗುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.