UDUPI
ಸೆಪ್ಟೆಂಬರ್ 17 ರಂದು ಮೇಧಾ ನ್ಯಾಚುರಲ್ ಕೋಲಾ ಬಿಡುಗಡೆ
ಉಡುಪಿ ಸೆಪ್ಟೆಂಬರ್ 15 : ಗಿಡಮೂಲಿಕೆಗಳ ಸತ್ವವುಳ್ಳ, ಮೇಡ್ ಇನ್ ಭಾರತ್ ಮೇಧಾ ನ್ಯಾಚುರಲ್ ಕೋಲಾ ಲೋಕಾರ್ಪಣೆ ಈ ತಿಂಗಳ 17ರಂದು ಅಂಬಾಗಿಲು ಅಮೃತ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ನಗರಸಭಾ ಸದಸ್ಯ ವಿಜಯ ಕೊಡವೂರು ತಿಳಿಸಿದರು.
ಇಂದಿನ ಯುವಜನತೆ ವಿದೇಶಿ ತಂಪು ಪಾನೀಯ ಮತ್ತು ಆಹಾರ ಪದ್ಧತಿಯ ಸುಳಿಗೆ ಸಿಲುಕಿ ಆರೋಗ್ಯ, ಜೀವನೋಲ್ಲಾಸ ಕಳೆದುಕೊಳ್ಳುತ್ತಿದೆ. ಭಾರತೀಯ ಆಹಾರ ಸಂಸ್ಕೃತಿ, ಇಲ್ಲಿನ ಗಿಡ ಮೂಲಿಕೆಗಳ ಸತ್ವವನ್ನು ಜನ ಮರೆತೇ ಬಿಟ್ಟಿದ್ದರು. ಆದರೆ, ಈಚಿನ ದಿನಗಳಲ್ಲಿ ಮತ್ತೆ ಭಾರತೀಯತೆ, ದೇಸೀತನದ ಬಗ್ಗೆ ಆಸಕ್ತಿ, ಕುತೂಹಲ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ರಾಸಾಯನಿಕಗಳಿಲ್ಲದೆ, ಕೃತಕ ಬಣ್ಣ ಬಳಸದೇ ಪ್ರಾಚೀನ ಕಾಲದಿಂದ ಬಳಸುತ್ತಿದ್ದ ನಮ್ಮ ಆರೋಗ್ಯದ ಗುಟ್ಟಾಗಿದ್ದ ನೈಸರ್ಗಿಕ ಆಹಾರ ಪದಾರ್ಥ ಮತ್ತು ಆಯುರ್ವೇದ ಸತ್ವವುಳ್ಳ ಹತ್ತಾರು ಗಿಡ ಮೂಲಿಕೆಗಳನ್ನು ಬಳಸಿ ಮನ್ವಂತರ ನ್ಯೂಟ್ರಾಸ್ಯುಟಿಕಲ್ಸ್ ಪ್ರೈ. ಲಿ. ಆಶ್ರಯದಲ್ಲಿ ಮೇಧಾ ನ್ಯಾಚುರಲ್ ಕೋಲಾ ತಯಾರಿಸಲಾಗುತ್ತಿದೆ.
ಆರೋಗ್ಯದ ಜೊತೆಗೆ ನೈಸರ್ಗಿಕ ಶಕ್ತಿಯನ್ನೂ ಮನೋಲ್ಲಾಸವನ್ನೂ ಇದು ಹೆಚ್ಚಿಸುತ್ತದೆ ಎಂದರು. ಸೆಪ್ಟೆಂಬರ್ 17ರಂದು ಬೆಳಿಗ್ಗೆ 9 ಗಂಟೆಗೆ ಅಂಬಾಗಿಲು ಅಮೃತ್ ಗಾರ್ಡನ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೇಧಾ ನ್ಯಾಚುರಲ್ ಕೋಲಾ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರಿನ ಶ್ರೀ ರಾಮದಾಸ ಆಶ್ರಮದ ಶ್ರೀ ಶಕ್ತಿಶಾಂತಾನಂದ ಮಹರ್ಷಿ ದೀಪ ಪ್ರಜ್ವಲನೆ ಮತ್ತು ಆಶಿರ್ವಚನ ನೀಡಲಿದ್ದಾರೆ. ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ನೂತನ ಉತ್ಪನ್ನ ಬಿಡುಗಡೆಗೊಳಿಸಲಿದ್ದಾರೆ.