LATEST NEWS
ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಅನಾರೋಗ್ಯದ ದಾಖಲೆ ಆಸ್ಪತ್ರೆ ಬಿಡುಗಡೆ ಮಾಡಲಿ
ಮಂಗಳೂರು, ಜನವರಿ 2: ಎಂಸಿಸಿ ಬ್ಯಾಂಕ್ ನಿಂದ ಸಾಲ ಪಡೆದಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಂಧನವಾಗಿರುವ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಆಸ್ಪತ್ರೆಗೆ ದಾಖಲಾಗಿದ್ದು, ಇವರ ಅನಾರೋಗ್ಯದ ಬಗ್ಗೆ ಅನುಮಾನವಿದ್ದು ಆಸ್ಪತ್ರೆಯವರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ, ಬ್ಯಾಂಕ್ ಸದಸ್ಯ ರೋಬರ್ಟ್ ರೋಸಾರಿಯೋ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಎಂಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದ ಅನಿಲ್ ಲೋಬೋ ಎಂಬವನು ಅಂಗ ಉನದಿಂದ ಬಳಲುತ್ತಿದ್ದ ಮನೋಹರ್ ಪಿರೇರನಿಗೆ ಕನಿಕರ ತೋರಿ ಸಹಾಯ ಮಾಡುವ ಬದಲು ಕಾಟ ಕೊಟ್ಟು ಸತಾಯಿಸಿ ಹಣ ಲಪಟಾಯಿಸಿ ಆತ ಪ್ರಾಣ ಕಳೆದುಕೊಳ್ಳುವಂತೆ ಮಾಡಿ ಇದೀಗ ಬಂಧಿತನಾಗಿ ಜೈಲಲ್ಲಿ ಇರಬೇಕಾಗಿದ್ದವನು ಯೆನೆಪೋಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಸೇರಿ ಅಲ್ಲಿಂದಲೇ ವ್ಯವಹರಿಸುವುದು ನ್ಯಾಯದ ಅಪಹಾಸ್ಯ !
ಆದ್ದರಿಂದ ಯೆನೆಪೋಯ ಅಸ್ಪತ್ರೆ ತಕ್ಷಣ ಮೆಡಿಕಲ್ ಬುಲೆಟಿನ್ ಜಾರಿ ಮಾಡಿ ಅನಿಲ್ ಲೋಬೋನ ಆರೋಗ್ಯದ ಬಗ್ಗೆ ವಿವರಣೆ ನೀಡಬೇಕು. ಆತ ಯಾವ ಪ್ರಾಣಾಪಾಯ ಇರುವ ರೋಗದಿಂದ ಬಳಲುತ್ತಿದ್ದಾನೆ ಎಂದು ವಿವರಿಸಬೇಕು. ಜೈಲಲ್ಲಿ ಇರಲು ಮಾರಕವಾಗುವ ಯಾವ ರೋಗ ಅವನಿಗೆ ಇದೆ, ಒಳರೋಗಿಯಾಗಿ ಸೇರಿ 13 ದಿನ ದಾಟಿದರೂ ಇನ್ನೂ ಗುಣಮುಖನಾಗದೆ ಒಳ ರೋಗಿಯಾಗಿಯೇ ಮುಂದುವರಿಯಲು ಎನು ಕಾರಣ, ಆತನಿಗೆ ಯಾವ ಚಿಕಿತ್ಸೆ, ಮದ್ದು ನೀಡಲಾಗುತ್ತದೆ, ಇನ್ನೂ ಎಷ್ಟು ಕಾಲ ಹೀಗಿಯೇ ಮುಂದುವರೆಯುವ ಸಾಧ್ಯತೆ ಇದೆ ಎಂಬುದನ್ನು ವಿವರಿಸಬೇಕು. ವೆನ್ಲಾಕ್ ಆಸ್ಪತ್ರೆಯಲ್ಲಿ ಸಿಗದ ಅಂತಹ ಯಾವ ಸೌಲಭ್ಯ ಆತನಿಗೆ ಅಗತ್ಯ ಇತ್ತು ಮತ್ತು ತಮ್ಮಲ್ಲಿ ಅದನ್ನು ಕೊಡಲಾಗಿದೆ ಎಂಬುದನ್ನೂ ವಿವರಿಸಬೇಕು.
ಯೆನೆಪೋಯ ಆಸ್ಪತ್ರೆಯ ವೈದ್ಯರು ಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ಆರೋಪಿಗೆ ಯಾವುದೇ ಪ್ರಾಣಾಪಾಯ ಇರುವ ಬಗ್ಗೆ ತಿಳಿಸಿಲ್ಲ. ಆದರೂ ಇನ್ನೂ ಜೈಲು ಸೇರದೆ ಒಳರೋಗಿಯಾಗಿಯೇ ಮುಂದುವರೆಯುವುದು ಅನೇಕ ಅನುಮಾನ ಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.