LATEST NEWS
ಕೊಚ್ಚೆಯಾದ ಸುರತ್ಕಲ್ ಅಂಡರ್ ಪಾಸ್, ಕೂಡಲೇ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಮೇಯರ್ ಸೂಚನೆ..!
ಅಂಡರ್ ಪಾಸ್ ತುಂಬಾ ನೀರು ಕೊಳಚೆ ನೀರು ತುಂಬಿ ಮೂಲ ಸೌಕರ್ಯಗಳೇ ಮಾಯವಾಗಿವೆ. ಇದರ ನಿರ್ಮಾಣ ಮಾಡಿದ್ದ ಹೆದ್ದಾರಿ ಪ್ರಾಧಿಕಾರ ಕೈಕಟ್ಟಿ ಕೂತಿದ್ದು ಜನ ಜೀವ ಕೈಯಲ್ಲಿ ಇಟ್ಟು ಹೆದ್ದಾರಿ ದಾಟುತ್ತಿದ್ದಾರೆ,
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಪ್ರದೇಶದ ಹೆದ್ದಾರಿಯಲ್ಲಿ ದಿನಿತ್ಯ ವಾಹನಗಳ ಓಡಾಟ ಹೆಚ್ಚಾಗಿದ್ದು, ಅದರಲ್ಲೂ ವಿದ್ಯಾರ್ಥಿಗಳು, ಮಹಿಳೆಯರು, ವಯೋವೃದ್ದರಿಗೆ ಇಲ್ಲಿ ಹೆದ್ದಾರಿ ರಸ್ತೆ ದಾಟುವುದೇ ಅಪಾಯಕಾರಿಯಾಗಿದೆ.
ಇಲ್ಲಿನ ವಿದ್ಯಾದಾಯಿನಿ ಶಾಲೆಯ ಬಳಿ ಇರುವ ಅಂಡರ್ ಪಾಸ್ ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಅಂಡರ್ ಪಾಸ್ ತುಂಬಾ ನೀರು ಕೊಳಚೆ ನೀರು ತುಂಬಿ ಮೂಲ ಸೌಕರ್ಯಗಳೇ ಇಲ್ಲದಂತಾಗಿದೆ. ಇದರ ನಿರ್ಮಾಣ ಮಾಡಿದ್ದ ಹೆದ್ದಾರಿ ಪ್ರಾಧಿಕಾರ ಕೈಕಟ್ಟಿ ಕೂತಿದ್ದು ಜನ ಜೀವ ಕೈಯಲ್ಲಿ ಇಟ್ಟು ಹೆದ್ದಾರಿ ದಾಟುತ್ತಿದ್ದಾರೆ,
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಂಡರ್ ಪಾಸ್ ತುಂಬಾ ಕೊಳಚೆ ನೀರು ತುಂಬಿಕೊಂಡಿದ್ದು, ಮಲಿನಗೊಂಡಿದೆ. ಬೆಳಕಿನ ವ್ಯವಸ್ಥೆ, ಸುಚಿತ್ವ ಇಲ್ಲದೆ ನಾದುರಸ್ಥಿಯಲ್ಲಿರುವುದನ್ನು ಗಮನಿಸಿದ ಮೇಯರ್ ಮೂಲಭೂತ ಸೌಕರ್ಯಗಳೊಂದಿಗೆ ಅದನ್ನು ಜನ ಉಪಯೋಗ ಮಾಡುವಂತೆ ಸೂಕ್ತ ಕ್ರಮಕ್ಕೆ ವಿಭಾಗೀಯ ಆಯುಕ್ತರಿಗೆ ಸೂಚಿಸಿದರು.