LATEST NEWS
ಮೇ 12 ರಾಜ್ಯದ 24 ಕಾರ್ಯಕರ್ತರ ಹತ್ಯೆಗೆ ಪ್ರತೀಕಾರ ತೀರಿಸುವ ದಿನ – ಅಮಿತ್ ಶಾ
ಮೇ 12 ರಾಜ್ಯದ 24 ಕಾರ್ಯಕರ್ತರ ಹತ್ಯೆಗೆ ಪ್ರತೀಕಾರ ತೀರಿಸುವ ದಿನ – ಅಮಿತ್ ಶಾ
ಮಂಗಳೂರು ಮೇ 08: ಮೇ 12 ರಾಜ್ಯದಲ್ಲಿ ನಡೆದ 24 ಕಾರ್ಯಕರ್ತರ ಹತ್ಯೆಗೆ ಪ್ರತೀಕಾರ ತೀರಿಸುವ ದಿನವದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಅಮಿತ್ ಶಾ ಮಂಗಳೂರು , ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಹಾಗು ಹಿಂದೂ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದ ಒಬ್ಬನೆ ಒಬ್ಬ ಆರೋಪಿಯನ್ನು ಈ ಸರ್ಕಾರ ಬಂಧಿಸಿಲ್ಲ. ಆರೋಪಿಗಳನ್ನು ಬಂಧಿಸದೆ ಅವರ ರಕ್ಷಣೆಗೆ ಈ ಕಾಂಗ್ರೆಸ್ ಸರಕಾರ ನಿಂತಿದೆ. ಹತ್ಯೆ ಮಾಡಿದವರನ್ನು ಇಷ್ಟುದಿನ ರಕ್ಷಿಸಿದ್ದಿರೀ . ಅದರೆ ನಮ್ಮ ಪಕ್ಷ ಅಧಿಕಾರ ಪಡೆದ ದಿನದಿಂದಲೇ ಆರೋಪಿಗಳನ್ನು ಪಾತಾಳದಲ್ಲಿದ್ದರೂ ಹುಡುಕಿ ಬಂಧಿಸಲು ಆರಂಭಿಸುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ನಿನ್ನೆ ಮೋದಿಗೆ ನೋಟಿಸ್ ಕೊಟ್ಟಿದ್ದಾರೆ . ರಾಜ್ಯದ ಜನತೆಯ ನಿರ್ಣಯ ಗೊತ್ತಾಗಿದೆ, ಹಾಗಾಗಿ ವಿಚಲಿತರಾಗಿ ನೋಟಿಸ್ ನೀಡಿದ್ದಾರೆ ಎಂದು ಹೇಳಿದ ಅವರು ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಗೆ ಓಡಿದ್ದಾರೆ . ಆದರೆ ಅಲ್ಲಿ ನಮ್ಮ ಶ್ರೀರಾಮುಲು ಗೆಲ್ತಾರೆ, ಸಿದ್ದರಾಮಯ್ಯ ಮನೆಗೆ ಹೋಗ್ತಾರೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಮಲದ ಚಿಹ್ನೆಗೆ ಮತ ನೀಡಿ. ಕಾಂಗ್ರೆಸಿಗರನ್ನು ನೇರವಾಗಿ ಇಟಲಿಗೆ ಅಟ್ಟಿ .ಮೇ 15ರಂದು ಸಿದ್ದರಾಮಯ್ಯರನ್ನು ಬದಲಿಸಿ ಯಡಿಯೂರಪ್ಪ ಸರಕಾರ ತನ್ನಿ ಎಂದು ಅವರು ಕರೆನೀಡಿದರು.