Connect with us

DAKSHINA KANNADA

ಮಠಂತಬೆಟ್ಟು ಮಹಿಷಮರ್ದಿನಿ ಬ್ರಹ್ಮಕಲಶ ; ಧಾರ್ಮಿಕ ಸಭಾ ಕಾರ್ಯಕ್ರಮ

ಪುತ್ತೂರು:ದೇವರ ಉಪಾಸನೆಯ ಮೂಲಕ ನಮ್ಮೊಳಗಿನ ಕಶ್ಮಲಗಳನ್ನು ದೂರವಾಗಿಸಬೇಕು. ನಾನೇ ಎಂಬ ಅಹಂ ತೊಡೆದು ಹಾಕಿ ಬದುಕಬೇಕು ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರಥಮ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.


ಒಂದೇ ಶಕ್ತಿಯನ್ನು ನಾನಾ ರೂಪ, ನಾಮದಲ್ಲಿ ಸ್ಮರಿಸುವ ಸಂಸ್ಕöÈತಿ ನಮ್ಮದು. ನಮ್ಮ ಮನೋಧರ್ಮಕ್ಕೆ ಅನುಗುಣವಾಗಿ ಆರಾಧಿಸುತ್ತೇವೆ. ದೇವರ ಉಪಾಸನೆಯಿಂದ ಮನಸ್ಸು ಪಕ್ವವಾಗುತ್ತದೆ ಎಂದು ನುಡಿದರು.

ಅತಿಥಿಗೃಹ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಕೋವಿಡ್ ಮಹಾಮಾರಿಯ ನಂತರ ನಾಡು ಸಹಜ ಸ್ಥಿತಿಗೆ ಬರುತ್ತಿದೆ. ದೇವರ ಆರಾಧನೆ ಮೂಲಕ ಮೂಲಕ ಲೋಕದ ಸಂಕಷ್ಟ ಕಣ್ಮರೆಯಾಗಿ ಸಂತುಷ್ಟದ ವಾತಾವರಣ ಮೂಡಲಿ. ವ್ಯವಸ್ಥಿತ ರೀತಿಯಲ್ಲಿ ಬ್ರಹ್ಮಕಲಶ ಆಯೋಜಿಸುವ ಮೂಲಕ ಮಠಂತಬೆಟ್ಟಿನ ಮಹಿಷಮರ್ದಿನಿ ಕ್ಷೇತ್ರ ಮಾದರಿಯಾಗಿದೆ ಎಂದರು.


ಇದೇ ಸಂಧರ್ಭದಲ್ಲಿ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕೋಡಿಂಬಾಡಿ ಮಹಿಷಮರ್ದಿನಿ ದೇವಾಲಯದ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ,ಮಾಜಿ ಶಾಸಕಿ ಟಿ.ಶಕುಂತಲಾ ಶೆಟ್ಟಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮೊಕ್ತೇಸರ ಕೃಷ್ಣ ಬೊಳ್ಳಿಲ್ಲಾಯ, ಬೆಂಗಳೂರಿನ ಸಮರ್ಥ ಸಂಸ್ಥೆಯ ಮಹಂತೇಶ್ ಜೆ.ಕೆ., ವೈದ್ಯ ಡಾ| ಸುರೇಶ್ ಪುತ್ತೂರಾಯ, ತಾ.ಪಂ.ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಂಗಳೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ, ವೈದ್ಯ ಡಾ.ರಘು ಬೆಳ್ಳಿಪ್ಪಾಡಿ, ಕೋಡಿಂಬಾಡಿ ಗ್ರಾ.ಪಂ.ಅಧ್ಯಕ್ಷ ರಾಮಚಂದ್ರ ಪೂಜಾರಿ, ಬನ್ನೂರು ಸೊಸೈಟಿ ಅಧ್ಯಕ್ಷ ಈಶ್ವರ ಭಟ್ ಪಡ್ನೂರು, ಸದಾಶಿವ ರೈ ಸೂರಂಬೈಲು, ಮಹೇಶ್ ಪೂಜಾರಿ ಮುಂಬೈ, ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಚಾರ ಸಮಿತಿ ಸಂಚಾಲಕ ಜಯಪ್ರಕಾಶ್ ಬದಿನಾರು, ಕರುಣಾಕರ ಮೊದಲಾದವರು ಉಪಸ್ಥಿತರಿದ್ದರು.

Advertisement
Click to comment

You must be logged in to post a comment Login

Leave a Reply