LATEST NEWS
ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಮೇನಿಯನ್ನು ಕೊಲ್ಲಲು ನಮಗೆ ಸಮ್ಮತಿ – ಇಸ್ರೇಲ್ ಗುಪ್ತಚರ ಸಂಸ್ಥೆ ‘ಮೊಸ್ಸಾದ್’
ಜೆರುಸಲೇಂ ಅಕ್ಟೋಬರ್ 20: ಇಸ್ರೇನ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರನ್ನು ಡ್ರೋನ್ ಬಳಸಿ ಹತ್ಯೆ ಮಾಡಲು ಮುಂದಾಗಿದ್ದ ಹೆಜ್ಬುಲ್ಲಾ ಹಾಗೂ ಇರಾನ್ ವಿರುದ್ದ ಇದೀಗ ಇಸ್ರೇಲ್ ತಿರುಗಿ ಬಿದ್ದಿದೆ.
ಇಸ್ರೇಲ್ ಬೇಹುಗಾರಿಕಾ ಸಂಸ್ಥೆ ಮಸೂದ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆ ಮಾಡಲು ನಡೆದ ಪ್ರಯತ್ನವು, ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿಯನ್ನು ಹೊಡೆದುರುಳಿಸಲು ನಮಗೆ ಕಾನೂನುಸಮ್ಮತಿ ನೀಡಿದಂತಾಗಿದೆ ಎಂದು ಹೇಳಿದೆ.
ಇಸ್ರೇಲ್ ಕರಾವಳಿಯ ಕೆಸರಿಯಾ ನಗರದಲ್ಲಿರುವ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಶನಿವಾರ ಡೋನ್ ದಾಳಿ ನಡೆದಿತ್ತು. ಇಸ್ರೇಲ್‌ನ ಗುಪ್ತಚರ ಮತ್ತು ವಿಶೇಷ ಕಾರ್ಯಾಚರಣೆಗಳ ಸಂಸ್ಥೆ ಮೊಸ್ಸಾದ್ ಈ ಘಟನೆ ಬೆನ್ನಲ್ಲೇ ಪ್ರತಿಕ್ರಿಯಿಸಿದೆ. ‘ಪ್ರಧಾನಿ ಹತ್ಯೆಗೆ ನಡೆದಿರುವ ಯತ್ನವು ಖಮೇನಿಯನ್ನು ಹೊಡೆದು ಹಾಕಲು ಸಂಪೂರ್ಣ ಕಾನೂನುಸಮ್ಮತಿ ನೀಡಿದೆ’ ಎಂದು ಟ್ವಿಟ್ ಮಾಡುವ ಮೂಲಕ ಇರಾನ್‌ಗೆ ಎಚ್ಚರಿಕೆ ನಿಡಿದೆ.