Connect with us

    LATEST NEWS

    ಮಸಾಜ್ ಪಾರ್ಲರ್ ಗಳ ಮೇಲೆ ಪೊಲೀಸರ ದಾಳಿ – 11 ಯುವತಿಯರ ರಕ್ಷಣೆ

    ಮಂಗಳೂರು ಅಗಸ್ಟ್ 30: ಮಂಗಳೂರಿನ ಎರಡು ಮಸಾಜ್ ಪಾರ್ಲರ್ ಗಳ ಮೇಲೆ ಸಿಸಿಬಿ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ 11 ಮಂದಿ ಯುವತಿಯರನ್ನು ರಕ್ಷಿಸಲಾಗಿದ್ದು, 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

    ನಗರದ ಶಿವಬಾಗ್ ನ ಇಂಡಿಯನ್ ಸ್ಯಾಂಡಲ್ ಎಂಬ ಆಯುರ್ವೇದಿಕ್ ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಪಾರ್ಲರ್ ನಲ್ಲಿದ್ದ ೫ ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ . ಬಂಧಿತರನ್ನು ಮಸಾಜ್ ಪಾರ್ಲರ್ ಮಾಲಕ ಪ್ರದೀಪ್ ತೊಕ್ಕೊಟ್ಟು, ರೇಷ್ಮಾ ,ಅಭಿಷೇಕ್ ಮುಳಿಹಿತ್ಲು , ಚಂದ್ರನಾಥ್ ಬೊಕ್ಕಪಟ್ನ ಎಂದು ಗುರುತಿಸಲಾಗಿದೆ. ಬಂಧಿತರಿಂದ 1500 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

    ನಗರದ ಕೆ.ಎಸ್ .ರಾವ್ ರಸ್ತೆಯಲ್ಲಿರುವ ಸಂಜೀವಿನಿ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರ ತಂಡ ಅಲ್ಲಿದ್ದ ಆರು ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಥೆರಪಿ ಕ್ಲಿನಿಕ್ ನ ಮಾಲೀಕ ಹರೀಶ್ ಶೆಟ್ಟಿ, ವೀಣಾ, ರವಿ ಎಂಬುವರನ್ನು ಬಂಧಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply