LATEST NEWS
ಲ್ಯಾಬ್ರಡಾರ್ ನಾಯಿ ಹೊಟ್ಟೆಯೊಳಗೆ ಎನ್ 95 ಮಾಸ್ಕ್….!!

ಕಾಸರಗೋಡು ಮಾರ್ಚ್ 1: ದನಗಳು ಪ್ಲಾಸ್ಟಿಕ್ ಪದಾರ್ಥಗಳನ್ನು ತಿನ್ನುವುದನ್ನು ಕೇಳಿರ್ತಿರಾ ಆದರೆ ಇಲ್ಲಿ ಸಾಕು ನಾಯಿಯ ಹೊಟ್ಟೆಯೊಳಗೆ ಎನ್ 95 ಮಾಸ್ಕ್ ಸೇರಿಕೊಂಡಿರುವ ಘಟನೆ ನಡೆದಿದ್ದು, ಶಸ್ತ್ರ ಚಿಕಿತ್ಸೆ ಮಾಡಿ ಮಾಸ್ಕ್ ತೆಗೆಯಲಾಗಿದೆ.
ನೀಲೇಶ್ವರದ ರಾಜನ್ ಎಂಬುವರು ಸಾಕಿರುವ ಲ್ಯಾಬ್ರಡಾರ್ ತಳಿಯ ನಾಯಿ ಕೆಲವು ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ. ಪಶುವೈದ್ಯರ ಸಲಹೆಯಂತೆ ಕಣ್ಣೂರು ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಲಾಯಿತು.
ವರದಿ ಪರಿಶೀಲಿಸಿದ ವೈದ್ಯರಿಗೆ ಶಾಕ್ ಆಗಿತ್ತು, ಕಾರಣ ನಾಯಿಯ ಹೊಟ್ಟೆಯೊಳಗೆ ಎನ್ 95 ಮಾಸ್ಕ್ ಒಂದು ಸೇರಿಕೊಂಡಿತ್ತು.ನಂತರ ಶಸ್ತ್ರಚಿಕಿತ್ಸೆ ಮೂಲಕ ಮಾಸ್ಕ್ ಅನ್ನು ಹೊರತೆಗೆಯಲಾಯಿತು.
