KARNATAKA
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ – ರಾಜ್ಯ ಸರಕಾರದ ಆದೇಶ

ಬೆಂಗಳೂರು ಜೂನ್ 10: ಕಳೆದ 10 ದಿನಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆ ರಾಜ್ಯ ಸರಕಾರ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.
ಹೊಸ ಮಾರ್ಗ ಸೂಚಿ ಬಿಡುಗಡೆಗೊಳಿರುವ ರಾಜ್ಯ ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಇದನ್ನು ಜಾರಿಗೊಳಿಸಲು ಮಾರ್ಷಲ್ ಮತ್ತು ಪೊಲೀಸರು ಸಹಾಯ ಪಡೆಯುವುದು. ಶಾಪಿಂಗ್ ಮಾಲ್, ರೆಸ್ಟೋರೆಂಟ್, ಪಬ್, ಥಿಯೇಟರ್, ಹೊಟೇಲ್, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‌ಗಳು, ಕಛೇರಿ ಕಾರ್ಖಾನೆ ಎಲ್ಲಾ ಕಡೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು. ಮಾಸ್ಕ್ ಹಾಕಿಕೊಂಡು ಬರದಿದ್ದರೆ ಪ್ರವೇಶ ನಿಷೇಧ. ಆಯಾಯ ಸಂಸ್ಥೆಯ ಆಡಳಿತ ಸಂಸ್ಥೆ ಮತ್ತು ಮಾಲೀಕರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.
