Connect with us

  LATEST NEWS

  ಮೇರಿಹಿಲ್ ಜಂಕ್ಷನ್ ಬಳಿ ನಡೆದ ಬೈಕ್ ಅಪಘಾತದ ಸಿಸಿಟಿವಿ ವಿಡಿಯೋ

  ಮಂಗಳೂರು ಜೂನ್ 07: ರಸ್ತೆ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾವೂರು ನಿವಾಸಿ ನಿಶಾಂಕ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.


  ಜೂನ್ 6 ರಂದು ರಾತ್ರಿ 11.30ರ ಸುಮಾರಿಗೆ ನಿಶಾಂಕ್ ಸ್ಕೂಟರ್ ನಲ್ಲಿ ಏರ್ಪೋರ್ಟ್ ರಸ್ತೆಯಲ್ಲಿ KPT ಕಡೆಯಿಂದ ಪದವಿನಂಗಡಿ ಕಡೆಗೆ ಹೋಗುತ್ತಿದ್ದಾಗ ಮೇರಿ ಹಿಲ್ ಜಂಕ್ಷನ್ ಬಳಿಯ ನೆಕ್ಸಾ ಶೋರೂಮ್ ಎದುರುಗಡೆ ರಸ್ತೆ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಈ ವೇಳೆ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಸ್ವರೂಪದ ಹೊಡೆತ ಬಿದಿದ್ದು, ಚಿಕಿತ್ಸೆಗಾಗಿ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಿಸಿಟಿವಿ ವಿಡಿಯೋ ಲಭ್ಯವಾಗಿದ್ದು , ಅಪಘಾತದ ತೀವೃತೆ ತಿಳಿಸುವಂತಿದೆ.

  VIDEO

  Share Information
  Advertisement
  Click to comment

  You must be logged in to post a comment Login

  Leave a Reply