LATEST NEWS
ಮರೆವು ರೋಗದ ಜಾಗೃತಿಗಾಗಿ ಮ್ಯಾರಥಾನ್

ಮರೆವು ರೋಗದ ಜಾಗೃತಿಗಾಗಿ ಮ್ಯಾರಥಾನ್
ಮಂಗಳೂರು, ಸೆಪ್ಟೆಂಬರ್ 24 : ಮರೆವು ರೋಗದ ಕುರಿತ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ಮಂಗಳೂರಿನ ಫಾರಂ ಫೀಜ್ಹಾ ಮಾಲ್ ಮೂಲಕ ನಡೆಯಿತು.
ಫಾರಂ ಫೀಜ್ಹಾ ಮಾಲ್ ಸಂಸ್ಥೆ ವತಿಯಿಂದ ಇಂದು ನಡೆದ ಮ್ಯಾರಥಾನ್ ಸ್ಪರ್ಥೆಯಲ್ಲಿ ಸಾವಿರಕ್ಕೂ ಮಿಕ್ಕಿದ ಮಕ್ಕಳು,ಯುವಕರು ಹಾಗೂ ಹಿರಿಯ ನಾಗರಿಕರು ಭಾಗವಹಿಸಿದ್ದರು. ಒಟ್ಟು ನಾಲ್ಕು ವಿಭಾಗದ ಮೆರಥಾನ್ ಸ್ಪರ್ಧೆಯನ್ನು ಇಲ್ಲಿ ಆಯೋಜಿಸಲಾಗಿತ್ತು. 21 ಕಿಲೋಮೀಟರ್ ದೂರದ ಫುಲ್ ಮಾರಥಾನ್, 10 ಕಿಲೋ ಮೀಟರ್ ದೂರದ ಹಾಫ್ ಮೆರಥಾನ್ ಹಾಗೂ 5 ಹಾಗೂ 3 ಕಿಲೋ ಮೀಟರ್ ದೂರದ ಮೆರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
21 ಕಿಲೋ ಮೀಟರ್ ಮೆರಥಾನ್ ಸ್ಪರ್ಧೆಗೆ ಫಾರಂ ಫಿಜ್ಹಾ ಮಹಲ್ ನ ಮಹಮ್ಮದ್ ಷರೀಫ್ ಚಾಲನೆ ನೀಡಿದರೆ, 10 ಕಿಲೋ ಮೀಟರ್ ಮ್ಯಾರಥಾನ್ ಗೆ ಮಂಗಳೂರು ಪೋಲೀಸ್ ಕಮಿಷನರ್ ಟಿ.ಆರ್.ಸುರೇಶ್ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.
ಮಂಗಳೂರು ನಗರ ಸುತ್ತಮುತ್ತ ಸಂಚರಿಸಿದ ಮ್ಯಾರಥಾನ್ ಬಳಿಕ ಫಾರಂ ಫೀಜಾ ಮಾಲ್ ಬಳಿ ಮುಕ್ತಾಯಗೊಂಡಿತು. ಶಾಸಕ ಮೊಯಿದ್ದೀನ್ ಬಾವ, ಮೇಯರ್ ಕವಿತಾ ಸನಿಲ್ ಸೇರಿದಂತೆ ಹಲವು ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಸ್ವತ ಮೇಯರ್ ಕವಿತಾ ಸನಿಲ್ 3 ಕಿಲೋ ಮೀಟರ್ ಮ್ಯಾರಥಾನ್ ರೇಸ್ ನಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.

ವಿಡಿಯೋಗಾಗಿ…