LATEST NEWS
ಛತ್ತೀಸಗಢದಲ್ಲಿ ನಕ್ಸಲರ ಅಟ್ಟಹಾಸ – ಹುತಾತ್ಮರಾದ 10 ಮಂದಿ ಪೊಲೀಸರು

ದಾಂತೇವಾಡ ಎಪ್ರಿಲ್ 26: ನಕ್ಸಲರ ಅಟ್ಟಹಾಸಕ್ಕೆ 10 ಮಂದಿ ಪೊಲೀಸರು ಹುತಾತ್ಮರಾದ ಘಟನೆ ಛತ್ತೀಸಗಢದ ಅರನಾಪುರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ನಕ್ಸಲರು ಸುಧಾರಿತ ಐಇಡಿ ಸ್ಪೋಟಕ ಸಿಡಿಸಿದ್ದರಿಂದ ಛತ್ತೀಸಗಢ ರಾಜ್ಯ ಪೊಲೀಸ್ ಇಲಾಖೆಯ ದಾಂತೇವಾಡ ಜಿಲ್ಲಾ ಮೀಸಲು ಪೊಲೀಸ್ ಪಡೆಯ 10 ಪೊಲೀಸರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಪೊಲೀಸ್ ವ್ಯಾನ್‌ನ ಒಬ್ಬ ಚಾಲಕ ಕೂಡ ಮೃತಪಟ್ಟಿದ್ದಾರೆ.
ಈ ಪೊಲೀಸರು ನಕ್ಸಲ್ ವಿರುದ್ಧದ ಕಾರ್ಯಾಚರಣೆ ಮುಗಿಸಿ ವಾಪಸ್ ವ್ಯಾನ್‌ನಲ್ಲಿ ಬರುವಾಗ ಇವರನ್ನು ಗೂಡ್ಸ್ ವಾಹನದಲ್ಲಿ ಹಿಂಬಾಲಿಸಿದ ನಕ್ಸಲರು ಐಇಡಿ ಸ್ಪೋಟಿಸಿದ್ದಾರೆ.

ಘಟನೆ ನಡೆದ ಸ್ಥಳ ಛತ್ತೀಸಗಢದ ರಾಜಧಾನಿ ರಾಯಪುರದಿಂದ 450 ಕಿಮೀ ದೂರದಲ್ಲಿದೆ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸಿಎಂ ಭೂಪೇಂದ್ರ ಸಿಂಗ್ ಭಗೇಲಾ ಅವರ ಜೊತೆ ದೂರವಾಣಿ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.