DAKSHINA KANNADA
ಮೂಲ್ಕಿ ತಾಲ್ಲೂಕಿಗೆ ಹಲವು ಯೋಜನೆಗಳು: ಶಾಸಕ ಉಮಾನಾಥ ಕೊಟ್ಯಾನ್
ಮೂಲ್ಕಿ, ಮಾರ್ಚ್ 02: ಮೂಲ್ಕಿ ತಾಲ್ಲೂಕಿಗೆ ಮುಂದಿನ ಐವತ್ತು ವರ್ಷಗಳಿಗೆ ಆಗುವಷ್ಟು ಯೋಜನೆಗಳನ್ನು ಈಗಲೇ ಅನುಷ್ಠಾನಕ್ಕೆ ತರಲಾಗಿದ್ದು ₹ 2 ಕೋಟಿ ವೆಚ್ಚದ ಪ್ರವಾಸಿ ಬಂಗಲೆ, 13 ಇಲಾಖೆಗಳ ಆಡಳಿತಸೌಧ, ಮೇಲ್ದರ್ಜೆಗೇರಿರುವ ಪಶು ವೈದ್ಯಕೀಯ ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಚ್ಚಾ ರಸ್ತೆಗಳ ಕಾಂಕ್ರಿಟೀಕರಣ ಮಾಡಲಾಗಿದೆ ಎಂದು ಶಾಸಕ ಉಮಾನಾಥ ಕೊಟ್ಯಾನ್ ಹೇಳಿದರು.
ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4ನೇ ಹಂತದಲ್ಲಿ ₹ 1 ಕೋಟಿ 24 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಮೂಡುಬಿದಿರೆ: ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಆರೋಪ
ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುಭಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಶೈಲೇಶ್ ಕುಮಾರ್, ಪುತ್ತುಬಾವ, ಮಂಜುನಾಥ ಕಂಬಾರ, ಶಾಂತಾ ಕಿರೋಡಿಯನ್, ನರಸಿಂಹ ಪೂಜಾರಿ, ಸುನಿಲ್ ಆಳ್ವಾ, ವಿನೋದ್ ಸಾಲ್ಯಾನ್, ರಾಧಿಕಾ ಕೋಟ್ಯಾನ್ ಮುಖ್ಯಾಧಿಕಾರಿ ಚಂದ್ರಪೂಜಾರಿ ಇದ್ದರು.