LATEST NEWS
ಜೂನ್ 4 ರಂದು ಕೇರಳ ಪ್ರವೇಶಿಸಲಿರುವ ಮುಂಗಾರು ಮಳೆ
ನವದೆಹಲಿ ಮೇ 17 :ಈಗಾಗಲೇ ಮಳೆ ಇಲ್ಲದೆ ಕಂಗಾಲಾಗಿರುವ ಕರಾವಳಿ ಜಿಲ್ಲೆಗಳಿಗೆ ಮತ್ತೊಂದು ಶಾಕ್ ಬಂದಿದ್ದು ಈ ಬಾರಿ ಮುಂಗಾರು ಮಳೆ ಕೇರಳಕ್ಕೆ ಜೂನ್ 4ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಹೇಳಿದೆ.
ವಾಡಿಕೆಯಂತೆ ಮುಂಗಾರು ಜೂನ್ 1ರಂದು ಕೇರಳ ಕರಾವಳಿಯನ್ನು ಪ್ರವೇಶಿಸಬೇಕು. ಈ ವರ್ಷ ಜೂನ್ 4ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ. ಮುಂಗಾರು ಪ್ರವೇಶವು ನಾಲ್ಕು ದಿನಗಳಷ್ಟು ಮುಂಚಿತವಾಗಿ ಅಥವಾ ವಿಳಂಬವಾಗಿ ಆಗುವ ಸಾಧ್ಯತೆಯೂ ಇದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ಮುಂಗಾರು ಮಾರುತವು ಕೇರಳ ಪ್ರವೇಶಿಸಿ, ನಂತರ ದೇಶದ ಇತರ ಭಾಗಗಳನ್ನು ಆವರಿಸಿಕೊಳ್ಳುತ್ತದೆ.
‘ಎಲ್ ನಿನೊ’ ಪರಿಸ್ಥಿತಿಯ ಹೊರತಾಗಿಯೂ ಈ ಬಾರಿ ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆಯು ಕಳೆದ ತಿಂಗಳು ಹೇಳಿತ್ತು.