LATEST NEWS
ಕರಾವಳಿಗೆ ಮುಂಗಾರು ಆಗಮನ ಎರಡು ದಿನ ಯಲ್ಲೋ ಅಲರ್ಟ್
ಜೂನ್ 7 ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ
ಮಂಗಳೂರು ಜೂ.5: ನಿರೀಕ್ಷೆಯಂತೆ ಇಂದು ಕರಾವಳಿಗೆ ಮುಂಗಾರು ಮಳೆ ಆಗಮನವಾಗಿದ್ದು, ಈ ಹಿನ್ನಲೆ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಬಾರಿ ನಿಗದಿತ ವೇಳಾಪಟ್ಟಿಯಂತೆ ಮುಂಗಾರು ಆಗಮಿಸಿದ್ದು, ಹವಮಾನ ಇಲಾಖೆ ಇನ್ನೆರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಜೂನ್ 7 ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಲವಾರು ವರ್ಷಗಳ ಬಳಿಕ ಈ ಬಾರಿ ಜೂ. 1ರಂದೇ ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶಿಸಿದ್ದವು. ಆ ಬಳಿಕ ಕೆಲವೇ ದಿನಗಳಲ್ಲಿ ಅವು ರಾಜ್ಯದ ಕರಾವಳಿ ಯನ್ನು ತಲುಪುವುದು ವಾಡಿಕೆ. ಈ ಬಾರಿ ಮಾನ್ಸೂನ್ ಈ ನಿಗದಿತ ವೇಳಾಪಟ್ಟಿ ಪಾಲಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಾರು 10 ದಿನಗಳ ಮುಂಚಿತ ವಾಗಿ ಕರಾವಳಿ ಪ್ರವೇಶಿಸಿದೆ. ಕಳೆದ ವರ್ಷ ಜೂನ್ 14ರಂದು ಅದು ಆಗಮಿಸಿತ್ತು.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಯಂತೆ ಈ ಬಾರಿಯ ಮುಂಗಾರು ಋತುವಿನಲ್ಲಿ ಕರಾವಳಿ ಯಲ್ಲಿ ವಾಡಿಕೆಯಂತೆ ಮಳೆಯಾಗುವ ಸಾಧ್ಯತೆ ಇದೆ.