KARNATAKA
ರಾಮನಗರ – ಬೀಡಿ ಸಿಗರೇಟ್ ಗೆ ಹಣಕ್ಕಾಗಿ ಏಳು ವರ್ಷದ ಬಾಲಕಿಯ ಕಿಡ್ನಾಪ್ – ಆರೋಪಿ ಅರೆಸ್ಟ್

ರಾಮನಗರ, ಸೆಪ್ಟೆಂಬರ್ 09: ತನ್ನ ಬೀಡಿ ಸಿಗರೇಟು ಚಟಕ್ಕಾಗಿ ಏಳು ವರ್ಷದ ಬಾಲಕಿಯನ್ನು ಅಪಹರಿಸಿದ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ದರ್ಶನ್ (22) ಅಪಹರಣಕ್ಕೆ ಯತ್ನಿಸಿದ ಆರೋಪಿ. ಆರೋಪಿ ದರ್ಶನ್ ಬಾಲಕಿಯ ಪಕ್ಕದ ಮನೆಯವನಾಗಿದ್ದಾನೆ.
ಬೀಡಿ ಸಿಗರೇಟು ಗಾಂಜಾ ಸೇವನೆಗೆ ಯಾರು ಹಣ ಕೊಡದ ಕಾರಣಕ್ಕೆ ಬಾಲಕಿಯನ್ನು ಅಪರಣ ಮಾಡಲು ಪ್ಯ್ಲಾನ್ ಮಾಡಿದನು. ಬಾಲಕಿಯನ್ನು ಅಪಹರಣ ಮಾಡಿ ಎರಡು ಲಕ್ಷ ರೂ. ಬೇಡಿಕೆ ಇಡಲು ಯೋಚಿಸಿದ. ಬಂದ ಹಣ ತನ್ನ ಚಟಕ್ಕೆ ಆಗುತ್ತದೆ ಎಂದು ಅಪಹರಣ ಕೃತ್ಯಕ್ಕೆ ಕೈ ಹಾಕಿದ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಬಾಲಕಿ ಗಣೇಶ ಪೆಂಡಲ್ ಬಳಿ ಇದ್ದಳು. ಈ ಸಮಯದಲ್ಲಿ ಅಲ್ಲಿಗೆ ಬಂದ ಆರೋಪಿ ದರ್ಶನ್ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ ಬಾಲಕಿಯ ಕೈ ಮತ್ತು ಬಾಯಿಗೆ ಟೇಪ್ನಿಂದ ಸುತ್ತಿದ್ದಾನೆ. ಮಗಳು ಕಾಣದಿದ್ದಾಗ ತಂದೆ ಸಂತೋಷ್ ಗಾಬರಿಗೊಂಡು ಹುಡುಕಾಡಲು ಆರಂಭಿಸಿದ್ದಾರೆ. ಈ ವಿಚಾರವನ್ನು ಗಣೇಶ ಪೆಂಡಲ್ ಬಳಿ ಇದ್ದ ಯುವಕರಿಗೂ ತಿಳಿಸಿದ್ದಾರೆ. ನಂತರ ಯುವಕರೆಲ್ಲರೂ ಒಂದುಗೂಡಿ ಹುಡುಕಾಡಲು ಶುರು ಮಾಡಿದ್ದಾರೆ. ಮಗಳು ಗಣೇಶ ಪೆಂಡಲ್ ಬಳಿಯೇ ಇದ್ದಳು ಎಂದು ದರ್ಶನ್ ಯುವಕರಿಗೆ ತಿಳಿಸಿದ್ದಾರೆ.
ಸ್ಥಳೀಯರ ಹುಡುಕಾಟ ಮತ್ತು ಬಾಯಿ ಶಬ್ದ ಕೇಳಿದ ಆರೋಪಿ ದರ್ಶನ ಬಾಲಕಿಯನ್ನು ಬಿಟ್ಟು ಪರಾರಿಯಾಗಲು ಮುಂದಾಗಿದ್ದಾನೆ. ಈತನ ಮೇಲೆ ಅನುಮಾನಗೊಂಡ ಯುವಕರು, ಹಿಡಿದು ವಿಚಾರಿಸಿದಾಗ ಬಾಯಿ ಬಿಟ್ಟಿದ್ದಾನೆ. ಕೂಡಲೆ ಅಡಗಿಸಿಟ್ಟ ಸ್ಥಳಕ್ಕೆ ಯುವಕರು ತೆರಳಿದಾಗ ಬಾಲಕಿ ಉಸಿರುಗಟ್ಟುವ ಹಂತದಲ್ಲಿದ್ದಳು. ಕೂಡಲೆ ಯುವಕರು ಬಾಲಕಿ ಕೈ ಮತ್ತು ಬಾಯಿಗೆ ಹಚ್ಚಿದ್ದ ಟೇಪ್ ತೆಗೆದು ರಕ್ಷಿಸಿದ್ದಾರೆ. ಆರೋಪಿ ದರ್ಶನ್ನನ್ನು ಯುವಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.