DAKSHINA KANNADA
ಮಂಜೇಶ್ವರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ – ಹಿಂದೂ ನಾಯಕ ಜ್ಯೋತಿಷ್ ಸಾವಿಗೆ ನ್ಯಾಯ ಸಿಗೋವರೆಗೂ ಬಿಜೆಪಿ ಸಭೆ ನಡೆಯಲು ಬಿಡಲ್ಲ ಎಂದ ಕಾರ್ಯಕರ್ತರು
ಕಾಸರಗೋಡು ಮಾರ್ಚ್ 20: ಕಾಸರಗೋಡಿನ ಹಿಂದೂ ಹುಲಿ ಎಂದೇ ಖ್ಯಾತಿಯಾಗಿದ್ದ ಜ್ಯೋತಿಷ್ ಸಾವಿಗೆ ನ್ಯಾಯ ಸಿಗೋವರೆಗೆ ಬಿಜೆಪಿ ಸಭೆ ನಡೆಯಲು ಬೀಡುವುದಿಲ್ಲ ಎಂದು ಜೋತ್ಯಿಷ್ ಬೆಂಬಲಿಗರು ಮಂಜೇಶ್ವರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮಂಜೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿದ ಜ್ಯೋತಿಷ್ ಬೆಂಬಲಿಗರು, ಹಿಂದೂ ನಾಯಕ ಜ್ಯೋತಿಷ್ ಸಾವಿಗೆ ನ್ಯಾಯ ಸಿಗೋವರೆಗೂ ಬಿಜೆಪಿ ಸಭೆ ನಡೆಯಲು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜ್ಯೋತಿಷ್ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಹೇಳಿದ್ದರು. ಆದರೆ ಜ್ಯೋತಿಷ್ ಸಾವಿನ ವಿಚಾರದಲ್ಲಿ ಒಂದು ತೀರ್ಮಾನ ಕೈಗೊಳ್ಳಲ್ಲದೇ ಬಿಜೆಪಿಯ ಯಾವ ಸಭೆಯನ್ನ ನಡೆಯಲು ಬಿಡೋದಿಲ್ಲ ಎಂದು ಕಾರ್ಯಕರ್ತರು ಹಠ ಹಿಡಿದರು.
ಅಲ್ಲದೆ ಕಾಸರಗೋಡಿನ ಬಿಜೆಪಿಯ ಕೆಲ ನಾಯಕರ ಷಡ್ಯಂತ್ರದಿಂದ ಜ್ಯೋತಿಷ್ ಸಾವಾಗಿದೆ ಎಂದು ಆರೋಪಿಸಿದ ಕಾರ್ಯಕರ್ತರು, ಬಿಜೆಪಿಯ ಕೆಲ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಕೂಡಲೇ ಬಿಜೆಪಿಯಿಂದ ಉಚ್ಚಾಟಿಸಿ ಎಂದರು. ಜ್ಯೋತಿಷ್ ಸಾವಿಗೆ ನ್ಯಾಯ ಸಿಗೋವರೆಗೂ ನ ಬಿಜೆಪಿಗರ ಸಭೆ ನಡೆಯಲು ಕಾಸರಗೋಡು ಜಿಲ್ಲೆಯಲ್ಲಿ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸದ್ಯ ಜ್ಯೋತಿಷ್ ಬೆಂಬಲಿಗರ ಆಕ್ರೋಶ ಕಾಸರಗೋಡು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿಜೆಪಿ ಸಭೆ ನಡೆಯಬೇಕಾದ್ರೆ ಜ್ಯೋತಿಷ್ ಸಾವಿನ ವಿಚಾರದಲ್ಲಿ ತೀರ್ಮಾನ ಆಗ್ಬೇಕು, ಈ ತೀರ್ಮಾನ ಆಗೋವರೆಗೂ ಬಿಜೆಪಿಗೆ ಭಾರೀ ಹಿನ್ನಡೆ ಸಾಧ್ಯತೆ.
ಸದ್ಯ ಕಾಸರಗೋಡು ಲೋಕಸಭಾ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರು ಗೆಲುವಿಗೆ ಪ್ರಯತ್ನ ಪಡುತ್ತಿದ್ದಾರೆ. ಆದರೆ ಕಾಸರಗೋಡಿನಾದ್ಯಂತ ಅನೇಕ ಬೆಂಬಲಿಗರನ್ನು ಅಭಿಮಾನಿಗಳನ್ನು ಹೊಂದಿರುವ ಜ್ಯೋತಿಷ್ ಅಭಿಮಾನಿಗಳು ತಿರುಗಿಬಿದ್ದಲ್ಲಿ ಬಿಜೆಪಿಗೆ ಹಿನ್ನಡೆ ಖಚಿತ ಎಂದು ಹೇಳಲಾಗುತ್ತಿದೆ.
ಆರ್ ಎಸ್ ಎಸ್ ನಲ್ಲಿ ಗುರುತಿಸಿಕೊಂಡು ಪ್ರಬಲ ನಾಯಕನಾಗಿ ಮುನ್ನುಗ್ಗುತ್ತಿದ್ದ ಜ್ಯೋತಿಷ್, ಕಾಸರಗೋಡು ಜಿಲ್ಲೆಯಲ್ಲೇ ಹಿಂದೂ ಹುಲಿ ಎಂದು ಗುರುತಿಸಿಕೊಂಡಿದ್ದ ಜ್ಯೋತಿಷ್ 2022 ಫೆಬ್ರವರಿ 15 ರಂದು ಶವವಾಗಿ ಪತ್ತೆಯಾಗಿದ್ದರು. ಮನೆಯ ಪಕ್ಕದಲ್ಲೇ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು.