LATEST NEWS
ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಕ್ಷೌರಿಕನನ್ನು ಕೆಲವೇ ಗಂಟೆಗಳಲ್ಲಿ ಎನ್ ಕೌಂಟರ್ ಮಾಡಿದ ಪೊಲೀಸರು
ಬದೌನ್ ಮಾರ್ಚ್ 20: ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆಯ ಇಬ್ಬರು ಮಕ್ಕಳ ಮೇಲೆ ದಾಳಿ ಮಾಡಿ ಬರ್ಬರ ವಾಗಿ ಹತ್ಯೆ ಮಾಡಿದ್ದ ಕ್ಷೌರಿಕನನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಪ್ರದೇಶದ ಪೊಲೀಸರು ಎನ್ ಕೌಂಟರ್ ಮಾಡಿ ಸಾಯಿಸಿದ್ದಾರೆ. ದಾಳಿ ಮಾಡಿದ ಬಾರ್ಬರ್‌ನನ್ನು ಸಾಜಿದ್ (22) ಎಂದು ಗುರುತಿಸಲಾಗಿದೆ.
ಇಲ್ಲಿನ ಬಾಬಾ ಕಾಲೋನಿಯಲ್ಲಿ ಸಾಜಿದ್ ಬಾರ್ಬಾರ್ ಶಾಪ್ ನಡೆಸುತ್ತಿದ್ದ. ಇದರ ಎದುರಿನ ಮನೆಗೆ ಹೋಗಿ ಮನೆಯ ಟೆರಸ್ ಮೇಲೆ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ಆಯುಷ್ (12) ಮತ್ತು ಆಯಾನ್ (8) ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ಬಾಲಕ ಯುವರಾಜ್ (10) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸಮೀಪದಲ್ಲೇ ಈ ಘಟನೆ ನಡೆದಿದೆ.
ಘಟನೆ ತಿಳಿದ ಸ್ಥಳಕ್ಕೆ ಹೋಗುವಷ್ಟರಲ್ಲಿ ಸಾಜಿದ್ ಅಲ್ಲಿಂದ ಪರಾರಿಯಾಗಿದ್ದ. ಅವನ ಬೆನ್ನತ್ತಿದ ಪೊಲೀಸರು ಬದೌನ್ ಹೊರವಲಯದಲ್ಲಿರುವ ಕಾಡಿನಲ್ಲಿ ಪತ್ತೆ ಮಾಡಿದ್ದರು. ಸಾಜಿದ್‌ನನ್ನು ಬಂಧಿಸುವ ವೇಳೆಯಲ್ಲಿ ಅವನು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಎನ್‌ಕೌಂಟರ್ ಮಾಡಿದ್ದರಿಂದ ಗುಂಡು ತಗುಲಿ ಸಾಜಿದ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
You must be logged in to post a comment Login