LATEST NEWS
ರಾಷ್ಟ್ರಪತಿಗೆ ದೃಷ್ಟಿ ತೆಗೆದು ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ ಜೋಗತಿ ಮಂಜಮ್ಮ
ನವದೆಹಲಿ : ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿ ಈಗ ನಿಜವಾಗಿಯೂ ಜನ ಸಾಮಾನ್ಯರ ಪ್ರಶಸ್ತಿಯಾಗಿ ಬದಲಾಗಿದ್ದು, ದೇಶದ ಮೂಲೆ ಮೂಲೆಯಿಂದ ಸಾಧಕರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇಂದು ನಡೆದ ಪದ್ಮಶ್ರೀ ಪ್ರಶಸ್ತಿ ಸಮಾರಂಭದಲ್ಲಿ ಕರ್ನಾಟಕದ ಜಾನಪದ ಅಕಾಡೆಮಿಯ ತೃತೀಯ ಲಿಂಗಿ ಅಧ್ಯಕ್ಷರಾಗಿರುವ ಜೋಗತಿ ಮಂಜಮ್ಮ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ರಾಷ್ಟ್ರಪ್ರಶಸ್ತಿ ಅವರಿಗೆ ದೃಷ್ಟಿ ತೆಗೆದು ಹರಿಸಿದ್ದಾರೆ. ಈ ಘಟನೆ ನೆರೆದಿದ್ದ ಪ್ರಧಾನಿ ಸೇರಿದಂತೆ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದ್ದು, ಎಲ್ಲರೂ ಚಪ್ಪಾಳೆ ಮೂಲಕ ಜೋಗತಿ ಮಂಜಮ್ಮ ಅವರನ್ನು ಅಭಿನಂದಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕ ಜಾನಪದ ಅಕಾಡೆಮಿಯ ಮೊಟ್ಟ ಮೊದಲ ತೃತೀಯ ಲಿಂಗಿ ಅಧ್ಯಕ್ಷರಾಗಿರುವ ಅವರು ಪದ್ಮಶ್ರೀ ಪ್ರಶಸ್ತಿ ಪಡೆದ ಎರಡನೇ ಟ್ರಾನ್ಸ್ ಜೆಂಡರ್ ಮಹಿಳೆಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.