LATEST NEWS
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೋಳಿ ಹರಾಜು…!!

ಉಡುಪಿ, ಫೆಬ್ರವರಿ 06: ಪೊಲೀಸ್ ಠಾಣೆಗಳಲ್ಲಿ ಹಳೆಯ ವಾಹನಗಳ ಹರಾಜು ನಡೆಯುತ್ತದೆ. ಆದರೆ ಉಡುಪಿಯ ಈ ಪೊಲೀಸ್ ಠಾಣೆಯಲ್ಲಿ ಕೋಳಿ ಅಂಕದ ಕೋಳಿಗಳ ಹರಾಜು ನಡೆದಿದೆ. ಜನ ತಾ ಮುಂದು ಅಂತ ಬಂದು ಒಳ್ಳೆ ರೇಟ್ ಗೆ ಕೋಳಿ ಕೊಂಡ್ಯೊಯ್ದಿದ್ದಾರೆ.
ಮಣಿಪಾಲ ಠಾಣೆ ಪೊಲೀಸರು ಕೋಳಿ ಅಂಕದಲ್ಲಿ ಬೆಟ್ಟಿಂಗ್ ನಡೆಯುವ ವೇಳೆ ದಾಳಿ ಮಾಡಿ ಸುಮಾರು 25 ಕೋಳಿಗಳನ್ನು ವಶಕ್ಕೆ ಪಡೆದಿದ್ದರು. ಈ ಕೋಳಿಗಳನ್ನು ಫೆಬ್ರವರಿ 5 ರಂದು ಹರಾಜು ಹಾಕಿದ್ದಾರೆ. ಒಂದು ಕೋಳಿಗೆ 400 ರೂ. ಒಂದು ವಾರ್, ಎರಡು ವಾರ್, ಮೂರು ವಾರ್ ಅಂತ ಹರಾಜು ಪ್ರಕ್ರಿಯೆ ನಡೆದಿದೆ. ಈ ಕೋಳಿಗಳನ್ನು ಖರೀದಿಸಲು ಕೋಳಿ ಪ್ರೀಯರು ಮುಗಿಬಿದ್ದಾರೆ.

ಕರಾವಳಿ ಭಾಗದಲ್ಲಿ ಸಂಪ್ರದಾಯ ಹೆಸರಿನಲ್ಲಿ ಕೋಳಿ ಅಂಕ ಬೆಟ್ಟಿಂಗ್ ಜೋರಾಗಿ ನಡೆಯುತ್ತದೆ. ಇದು ಒಂದು ಜೂಜು ಆಗಿದೆ. ಇನ್ನು ಈ ಕೋಳಿ ಅಂಕ ನಡೆಸಲು ಅನುಮತಿ ಪಡೆಯಬೇಕು. ಆದರೆ ಅನುಮತಿ ಪಡೆಯದೆ ಕೋಳಿ ಅಂಕ ನಡೆಸಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.